ರಾಜ್ಯದಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೋಂಕು: ಇಂದು 4120 ಪಾಸಿಟಿವ್ , ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್

ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಯಲ್ಲಿ ಪಲ್ಲಟ:

ಬೆಂಗಳೂರು: ರಾಜ್ಯದಲ್ಲಿಂದು 4120 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 63772 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 1290. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 23065 ಕೇಸ್ ಗಳು. ರಾಜ್ಯದಲ್ಲಿ 39370 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 91 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 1331 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.
ಈಗಾಗಲೇ ಕರ್ನಾಟಕವು ಸೋಂಕು ಬೆಳವಣಿಗೆ ದರದಲ್ಲಿ ಶೇ.7.14 ರಷ್ಟು ಪ್ರಮಾಣ ಹೊಂದಿದ್ದು ದೇಶದಲ್ಲೇ ಇದು ಅತಿ ಹೆಚ್ಚಿನದಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

ಬೆಂಗಳೂರು ನಗರ- 2156
ದಕ್ಷಿಣ ಕನ್ನಡ-285
ವಿಜಯಪುರ-171
ಚಿಕ್ಕಬಳ್ಳಾಪುರ-135
ಉಡುಪಿ-134
ಧಾರವಾಡ- 126
ಮೈಸೂರು-110
ಶಿವಮೊಗ್ಗ-104
ಬೆಳಗಾವಿ-87
ಬಳ್ಳಾರಿ-73
ಬೆಂಗಳೂರು ಗ್ರಾಮಾಂತರ-70
ಕಲಬುರಗಿ-69
ಉತ್ತರ ಕನ್ನಡ-69
ದಾವಣಗೆರೆ-62
ಬಾಗಲಕೋಟೆ-60
ಹಾವೇರಿ-54
ಬೀದರ್-45
ಹಾಸನ-43
ಚಿಕ್ಕಮಗಳೂರು-41
ರಾಯಚೂರು-32
ಗದಗ-30
ರಾಮನಗರ-29
ಕೋಲಾರ-25
ಚಾಮರಾಜನಗರ-25
ತುಮಕೂರು-19
ಕೊಪ್ಪಳ-19
ಚಿತ್ರದುರ್ಗ-17
ಕೊಡಗು-13
ಯಾದಗಿರಿ-10
ಮಂಡ್ಯ-07

Exit mobile version