ಎಡಗೈ ಆಟಗಾರರು ನಿಜವಾಗಿಯೂ ಪ್ರತಿಭಾವಂತರೆ?

left hand cricket

left hand cricket

ಮುಂಬಯಿ : ಭಾರತ ತಂಡದ ಪ್ರತಿಭಾವಂತೆ ಹಾಗೂ ಸ್ಟೈಲಿಷ್ಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶನಿವಾರ ತಮ್ಮ 24ನೇ ಹುಟ್ಟು ಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅವರಿಗೆ ಖ್ಯಾತ ಆಟಗಾರರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ನಿಮ್ಮ ಅದ್ಭುತ ಪ್ರದರ್ಶನ ಹೀಗೆ ಮುಂದುವರೆಸಿ ಭಾರತದ ತ್ರಿವರ್ಣ ಧ್ವಜವನ್ನು ಮೇಲೆಕ್ಕೆತ್ತಿರಿ. ಟೀಮ್ ಇಂಡಿಯಾದಲ್ಲಿ ಎಡಗೈ ಆಟಗಾರರು ಪ್ರತಿಭಾವಂತರೆಂಬ ಖ್ಯಾತಿ ಹೊಂದಿದ್ದಾರೆ. ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿರಿ ಎಂದು ಬಹುತೇಕರು ಶುಭ ಹಾರೈಸಿದ್ದಾರೆ.

ಇಲ್ಲಿ ಟೀಮ್ ಇಂಡಿಯಾ ಮಾಜಿ ಆಲ್ರೌಂಡ್ ಯುವರಾಜ್ ಸಿಂಗ್ ಕೂಡ ಎಡಗೈ ದಾಂಡಿಗ. ಹಾಗೆಯೇ ಸ್ಪೋಟಕ ಇನಿಂಗ್ಸ್ ಮೂಲಕ ಮನೆಮಾತಾಗಿರುವ ಸೃತಿ ಮಂಧನಾ ಸಹ ಲೆಫ್ಟ್ ಬ್ಯಾಟ್ಸ್ವುಮೆನ್. ಹೀಗಾಗಿ ಯುವಿಯ ಟ್ವೀಟ್ ಎಲ್ಲರ ಗಮನ ಸೆಳೆಯಿತು.

ಹಾಗೆಯೇ ಸೃತಿ ಕೂಡ ಯುವರಾಜ್ ಸಿಂಗ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಸಿಕ್ಸರ್ ಸಿಂಗ್ ಅವರ ಆಟವೇ ನನಗೆ ಸ್ಫೂರ್ತಿ ಎಂದಿದ್ದರು.

24ರ ಹರೆಯದ ಸೃತಿ ಮಂಧನಾ ಟೀಮ್ ಇಂಡಿಯಾ ಪರ 51 ಏಕದಿನ ಪಂದ್ಯಗಳಿಂದ 2025 ರನ್ಗಳಿಸಿದ್ದಾರೆ. ಇದರಲ್ಲಿ 17 ಅರ್ಧಶತಕಗಳು ಹಾಗೂ 4 ಶತಕಗಳು ಮೂಡಿ ಬಂದಿವೆ.

2 ಟೆಸ್ಟ್ ಪಂದ್ಯಗಳನ್ನಾಡಿರುವ ಸೃತಿ, 1 ಅರ್ಧಶತಕದೊಂದಿಗೆ 81 ರನ್ಗಳಿಸಿದ್ದಾರೆ. ಇನ್ನು 75 ಟಿ20 ಪಂದ್ಯಗಳಿಂದ 1716 ರನ್ ಕಲೆಹಾಕಿರುವ ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಪೋಟಕ 12 ಅರ್ಧಶತಕಗಳನ್ನು ಬಾರಿಸಿದ್ದಾರೆ.

Exit mobile version