ಇನ್ಮುಂದೆ ಗ್ರಾಮ ಪಂಚಾಯತಿಯಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣ ಪತ್ರ

vidhana soudha

vidhana soudha

ಇ-ಜನ್ಮ ತಂತ್ರಾಂಶದಲ್ಲಿ ತಮ್ಮ ಡಿಜಿಟಲ್ ಸಹಿ ಮುಖಾಂತರ ಜನನ, ಮರಣ ವಿವರಗಳನ್ನು ಪಿಡಿಒಗಳು ದಾಖಲಿಸಬೇಕು.

ಬೆಂಗಳೂರು: ರಾಷ್ಟ್ರೀಯ ಜನನ-ಮರಣ ಕಾಯ್ದೆ 1967ರ ಅಧ್ಯಾಯ 5ರ ಪ್ರಕರಣ 27 ರ ಅಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಜನನ ಮತ್ತು ಮರಣ ಪತ್ರಗಳ ವಿತರಣಾಧಿಕಾರಿ ಎಂದು ರಾಜ್ಯಪಾಲರ ಆದೇಶದ ಪ್ರಕಾರ ನೇಮಕ ಮಾಡಿ, ಸರ್ಕಾರದ ಅಧೀನ ಕಾರ್ಯದರ್ಶಿ (ಜಿಪಂ) (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಆದೇಶ ಹೊರಡಿಸಿದ್ದಾರೆ.

ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಪಿಡಿಒಗಳು ಈ ಕೆಲಸ ನಿರ್ವಹಿಸಬೇಕು ಮತ್ತು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಸಂಗ್ರಹಿಸಿ ಜಮಾ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಪಿಡಿಒಗಳನ್ನು ಜನನ-ಮರಣ ಪತ್ರದ ವಿತರಣಾಧಿಕಾರಿ ಎಂದು ನೇಮಿಸಬಹುದು ಎಂದು ತಿಳಿಸಿರುವ ಆಧಾರದಲ್ಲಿ ಈ ನೇಮಕ ಮಾಡಲಾಗಿದೆ.

ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ 1993ರ ಪ್ರಕಾರ ಜನನ-ಮರಣಗಳ ತ್ವರಿತ ನೋಂದಣಿ ಮಾಡುವುದು ಗ್ರಾಮ ಪಂಚಾಯತಿಗಳ ಕರ್ತವ್ಯವಾಗಿದೆ. ಈಗ ಗ್ರಾಮ ಪಂಚಾಯತಿಯ ಪಿಡಿಒಗಳಿಗೆ ಈ ಹೊಣೆಯನ್ನು ನೀಡಲಾಗಿದೆ.

Exit mobile version