ಭಾರತದ ಅತಿ ಶ್ರೀಮಂತ ಮಹಿಳೆ ರೋಶ್ನಿ: 38 ವರ್ಷಕ್ಕೆ ಎಚ್.ಸಿ.ಎಲ್ ಕಂಪನಿ ಅಧ್ಯಕ್ಷೆ

roshni nadar women

ಭಾರತದ ಅತಿ ಶ್ರೀಮಂತ ಮಹಿಳೆ ರೋಶ್ನಿ, 38 ವರ್ಷಕ್ಕೆ ಎಚ್.ಸಿ.ಎಲ್ ಕಂಪನಿ ಅಧ್ಯಕ್ಷೆ

ವಾಣಿಜ್ಯ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ-ಎಂಬಿಎ ಮಾಡಿರುವ ರೋಶ್ನಿ ಈಗ ಎಚ್.ಸಿ.ಎಲ್. ಟೆಕ್ನಾಲಜೀಸ್ ಕಂಪನಿಯ ಅಧ್ಯಕ್ಷೆ ಆಗಿದ್ದಾರೆ.

ನವದೆಹಲಿ:  ಶಿವ್ ನಾಡಾರ್ ತೆರವು ಮಾಡಿದ ಸ್ಥಾನಕ್ಕೆ ಅವರ ಮಗಳು ರೋಶ್ನಿ ನಾಡಾರ್ ಮಲ್ಹೋತ್ರಾ ಅವರನ್ನು ನೇಮಕ ಮಾಡಲಾಗಿದೆ.

ತಂದೆ ಕಂಪನಿಗೆ ಮಗಳು ಮುಖ್ಯಸ್ಥೆ ಆಗುವುದೇನೂ ದೊಡ್ಡ ಮಾತಲ್ಲ ಅನ್ನಬಹುದು. ಅದೂ ಸತ್ಯವೇ, ಶಿವ್ ನಾಡಾರ್ ಪುತ್ರಿ ಆಗಿರದಿದ್ದರೆ 38 ವರ್ಷಕ್ಕೆ ಈ ಸ್ಥಾನ ಸಿಗುತ್ತಿರಲಿಲ್ಲವೇನೋ?

ಹಾಗಂತ ರೋಶ್ನಿಯ ವೈಯಕ್ತಿಕ ಸಾಧನೆ, ವ್ಯಕ್ತಿತ್ವವನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಾಫ್ಟ್ ವೇರ್ ದೈತ್ಯ ಎಚ್.ಸಿ.ಎಲ್ ಕಂಪನಿಯಲ್ಲಿ ಹಲವು ಹಂತಗಳಲ್ಲಿ ಕೆಲಸ ಮಾಡಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾಳೆ. ಕಂಪನಿಯಲ್ಲಿ ಈಗ ಸಾಕಷ್ಟು ಶೇರುಗಳನ್ನು ಪಡೆದಿರುವ ಆಕೆ ಭಾರತದ ಅತಿ ಶ್ರೀಮಂತ ಮಹಿಳೆ ಎನಿಸಿದ್ದಾರೆ.

ದೆಹಲಿಯಲ್ಲಿ ಓದಿ ಬೆಳೆದ ರೋಶ್ನಿ ಅಮೆರಿಕದ ಇಲಿಯಾನ್ಸಿನ ನಾರ್ಥ್-ವೆಸ್ಟರ್ನ್ ವಿವಿಯಿಂದ ಪದವಿ ಮತ್ತು ಎಂಬಿಎ ಪದವಿ ಗಳಿಸಿದ್ದಾರೆ.

2013ರಲ್ಲೇ ಅವರನ್ನು ಎಚ್.ಸಿ.ಎಲ್ ಬೋರ್ಡ್ ನಲ್ಲಿ ಹೆಚ್ಚುವರಿ ಡೈರೆಕ್ಟರ್ ಆಗಿ ಸೇರಿಸಿಕೊಳ್ಳಲಾಗಿತ್ತು. ನಂತರ ಕಂಪನಿಯ ಸಿಇಒ ಆದರು. ಈಗ ಅಧ್ಯಕ್ಷೆ ಪದವಿಗೇರಿದ್ದಾರೆ.  ಎಚ್.ಸಿ.ಎಲ್ ಟೆಕ್ನಾಲಜಿ  ದೇಶದಲ್ಲಿ ಸಾಫ್ಟ್ ವೇರ್ ರಫ್ತಿನಲ್ಲಿ ಮೂರನೆ ಸ್ಥಾನದಲ್ಲಿದೆ.

Exit mobile version