ಕೋವಿಡ್-19 ಗದಗ ಜಿಲ್ಲೆ : ಪ್ರತಿಬಂಧಿತ ಪ್ರದೇಶಗಳ ಘೋಷಣೆ

containment gadag district

District of Gadag Impunity clearance of 9 containment areas


ಗದಗಜುಲೈ 14  :   ಗದಗ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ಸಕಾರಾತ್ಮಕ ಕಂಡುಬ0ದ ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳನ್ನಾಗಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಘೋಷಿಸಿದ್ದಾರೆ.  


ಗಜೇಂದ್ರಗಡ ಪುರಸಭೆ ವಾರ್ಡ ನಂ. 20, ಪೂಜಾರ ಓಣಿ,  ವಾರ್ಡ ನಂ. 13 ಬೆಂಡಿಕಾಯಿ ಓಣಿ, ವಾರ್ಡ ನಂ. 06, ಮರದಾರ ಓಣಿ, ಹಾಗೂ ತಾಲೂಕಿನ ಮುಶಿಗೇರಿ ಗ್ರಾಮದ ವಾರ್ಡ ನಂ. 1 ರ ಸುತ್ತಲಿನ ವ್ಯಾಪ್ತಿ ಇವನ್ನು ಪ್ರತಿಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ಲಕ್ಷೆöಮಶ್ವರ ಪುರಸಭೆ ವಾರ್ಡ ನಂ. 05ರ ದೂದನಾನಾ ದರ್ಗಾ ಹತ್ತಿರ ಪ್ರತಿಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಲಕ್ಷೆಮಶ್ವರ ತಾಲೂಕ ಗೊಜನೂರು ಗ್ರಾಮದ ಹರಿಜನ ಕೇರಿ, ಶಿಗ್ಲಿ ಗ್ರಾಮ ಪಂಚಾಯತ್ ವಾರ್ಡ ನಂ. 03 ಇವನ್ನು ಪ್ರತಿಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ನರಗುಂದ ಪುರಸಭೆ ವಾರ್ಡ ನಂ. 04 ಹೊರಕೇರಿ ಓಣಿ, ವಾರ್ಡ ನಂ. 10 ದಂಡಾಪುರ 1 ನೇ ಹಾಗೂ 3 ನೇ ಗಲ್ಲಿ, ವಾರ್ಡ ನಂ. 6 ಸೋಮಾಪುರ ಗ್ರಾಮದ  ಅಲ್ಲಿಬಾಯಿ ನಗರ ಸುತ್ತಲಿನ  ಪ್ರದೇಶವನ್ನು, ನಿಯಂತ್ರಿತ ಪ್ರದೇಶವೆಂದು ಘೋಷಿಸಲಾಗಿದೆ. ನರಗುಂದ ತಾಲೂಕಿನ ಕೊಣ್ಣೂರು ಗ್ರಾಮ ಪಂಚಾಯತ್ ವಾರ್ಡ ನಂ.06ರ ಸಂಕದಾಳ ಗ್ರಾಮ, ಚಿಕ್ಕನರಗುಂದ ಗ್ರಾಮ ಕೆಳಗಡೆ ಓಣಿಯ ಪ್ರದೇಶ ಇವನ್ನು ಪ್ರತಿಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ಮುಂಡರಗಿ ಪುರಸಭೆಯ ವಾರ್ಡ ನಂ.18, ವಿದ್ಯಾ ನಗರ  ಪ್ರದೇಶವನ್ನು ಪ್ರತಿಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ರೋಣ ತಾಲೂಕು ಯಾವಗಲ್ ಗ್ರಾಮ ಪಂಚಾಯತ್ ವಾರ್ಡ ನಂ.1, ಹುಲ್ಲೂರು ಗ್ರಾಮ ಪಂಚಾಯತ್ ವಾರ್ಡ ನಂ. 3 ಇವನ್ನು ಪ್ರತಿಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಗದಗ ತಾಲೂಕು ನಾಗಾವಿ ಗ್ರಾಮ ಪಂಚಾಯತ್ ವಾರ್ಡ ನಂ.1  ಗಾಳೆಮ್ಮ ದೇವಸ್ಥಾನ, ಹುಲಕೋಟಿ ಗ್ರಾಮ ಪಂಚಾಯತ್ ವಾರ್ಡ ನಂ.07  ಫಾರ್ಮ ಹೌಸ್ ಆಫ್ ಹುಲಕೋಟಿ, ಹರ್ತಿ ಗ್ರಾಮ ಪಂಚಾಯತ್  ವಾರ್ಡ ನಂ. 03, ಕಣವಿ ಗ್ರಾಮದ ಹಾಸ್ಟೆಲ್ ಪ್ರದೇಶ, ಹರ್ತಿ ಗ್ರಾಮ ಪಂಚಾಯತ್ ವಾರ್ಡ ನಂ.01, ಅಂಬೇಡ್ಕರ್ ಕಾಲನಿ, ಮುಳಗುಂದ ಪಟ್ಟಣ ಪಂಚಾಯತಿ ವಾರ್ಡ ನಂ. 02 ಕೋಟಿ ಓಣಿ ಇವನ್ನು ಪ್ರತಿಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.


ಗದಗ-ಬೆಟಗೇರಿ ನಗರ ಸಭೆಯ ವಾರ್ಡ ನಂ.25ರ ವಿ.ಎನ್.ಟಿ ರಸ್ತೆ ಮತ್ತು ಕಾಗದಗಾರ ಓಣಿ, ವಾರ್ಡ ನಂ.6 ಶರಣಬಸವೇಶ್ವರ ನಗರ, ವಾರ್ಡ ನಂ. 33 ಹುಬ್ಬಳ್ಳಿ ರೋಡ ಮತ್ತು ವಾರ್ಡ ನಂ.35 ರ ಬಾಲಾಜಿ ನಗರ, ಸಿದ್ಧಲಿಂಗನಗರ 3ನೇ ಕ್ರಾಸ್ ಮತ್ತು ಕಳಸಾಪುರ ರಸ್ತೆ, ರಾಜೀವ ಗಾಂಧಿ ನಗರ, ಹುಡಕೋ ಪ್ಲಾಟ್ ವಾರ್ಡ  ನಂ. 29, ವಾರ್ಡ ನಂ. 06 ಹರಿಜನ ಕೇರಿ, ಸಿದ್ಧರಾಮೇಶ್ವರ ನಗರ ವಾರ್ಡ ನಂ. 34, ರೆಹಮತ್ ನಗರ ವಾರ್ಡ ನಂ. 16, ಟರ್ನಲ್ ಪೇಟೆ ವಾರ್ಡ ಸಂಖ್ಯೆ 04, ಹಾಗೂ ಮಂಜುನಾಥ ನಗರ, ಎಸ್.ಎಮ್. ಕೃಷ್ಣ ನಗರ ವಾರ್ಡ ನಂ. 2, ಕಮತರ್ ಪ್ಲಾಟ್, ಒಕ್ಕಲಗೇರಿ ಓಣಿ ವಾರ್ಡ ನಂ. 21,  ಚಾಪೇಕರ್ ಆಸ್ಪತ್ರೆ, ವಾರ್ಡ ನಂ.14, ವಾಡ್ ನಂ. 15ರ ಬಸವೇಶ್ವರ ನಗರ, ಜನತಾ ಕಾಲನಿ ಖಾನ ತೋಟ ವಾರ್ಡ ನಂ. 20, ದಾಸರ ಓಣಿ ವಾರ್ಡ ನಂ. 32, ಸಿದ್ಧರಾಮೇಶ್ವರ ನಗರ ವಾರ್ಡ ನಂ. 34,  ಹಾಗೂ  ಯಲಿಗಾರ ಪ್ಲಾಟ್ ವಾರ್ಡ ನಂ. 21 ಕನ್ಯಾಳ ಅಗಸಿ ವಾರ್ಡ ನಂ. 07, ಹಾತಲಗೇರಿ ನಾಕಾ ವಾರ್ಡ ನಂ. 28,  ಇವನ್ನು ಪ್ರತಿಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.


     100 ಮೀಟರ ವ್ಯಾಪ್ತಿಯ ಪ್ರತಿಬಂಧಿತ ಪ್ರದೇಶಗಳ ನಗರ ವ್ಯಾಪ್ತಿಯ ಸುತ್ತಲಿನ 5 ಕಿ.ಮೀ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರತಿಬಂಧಿತ ಪ್ರದೇಶಗಳ ಸುತ್ತಲಿನ 7 ಕಿ.ಮೀ ಸುತ್ತಳತೆಯ ಪ್ರದೇಶವನ್ನು ಕಂಟೈನ್‌ಮೆAಟ್ ಬಫರ್ ಝೋನ್ ಎಂದು ಘೋಷಿಸಿದೆ.  ಈ ಎಲ್ಲ ಘೋಷಿತ ಪ್ರತಿಬಂಧಿತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕೊವಿಡ್-19 ಸೋಂಕು ತಡೆ ಕಾರ್ಯ ನಿರ್ವಹಿಸಲು ಪ್ರತ್ಯೇಕವಾಗಿ ಇನ್ಸಿಡೆಂಟ್ ಕಮಾಂಡರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಅವರುಗಳು ತಮ್ಮ ವ್ಯಾಪ್ತಿಯ ಪ್ರತಿಬಂಧಿತ ಪ್ರದೇಶಗಳ ಸಂಪೂರ್ಣ ಹೊಣೆಗಾರಿಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು  ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Exit mobile version