ರಾಜಸ್ತಾನ್ ರಾಜಕೀಯ: ಕ್ಲೈಮಾಕ್ಸ್ ಗೆ ಕ್ಷಣಗಣನೆ:ಡಿಸಿಎಂ, ರಾಜ್ಯಾಧ್ಯಕ್ಷ ಹುದ್ದೆಯಿಂದ ಪೈಲಟ್ ಡ್ರಾಪ್

rajastan

ರಾಜಸ್ತಾನ ಸರ್ಕಾರ ಕೆಡವಲು ಆಪರೇಷನ್ ಕಮಲ ಕಳೆದ ಎರಡು ದಿನಗಳಿಂದ ರಾಜಸ್ತಾನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಎರಡನೆ ಶಾಸಕಾಂಗೀಯ ಪಕ್ಷದ ಸಭೆಗೂ ಗೈರು ಹಾಜರಾದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಳಿಂದ ಕೈಬಿಡಲಾಗಿದೆ.

ಜೈಪುರ: ಮೂರು ದಿನಗಳಿಂದ ಸಾರ್ವಜನಿಕವಾಗಿ ನಡೆಯುತ್ತಿರುವ  ರಾಜಸ್ತಾನ ರಾಜಕೀಯದ ಹಗ್ಗ-ಜಗ್ಗಾಟ ಈಗ ಕ್ಲೈಮಾಕ್ಸ್ ಹಂತದತ್ತ ಚಲಿಸುತ್ತಿದೆ. ಪಕ್ಷ ಸಾರ್ವಜನಿಕವಾಗಿಯೇ ಆಹ್ವಾನ ನೀಡಿದರೂ ಇಂದು ಮಂಗಳವಾರ ನಡೆದ ಎರಡನೆ ಶಾಸಕಾಂಗ ಪಕ್ಷದ ಸಭೆಗೂ ಗೈರು ಆಗುವ ಮೂಲಕ ಸಚಿನ್ ಪೈಲಟ್ ಬಿಜೆಪಿಯ ಅಂಗಳಕ್ಕೆ ಕಾಲಿಡುವ ಮುನ್ಸೂಚನೆ ನೀಡಿದ್ದಾರೆ.

ನಿನ್ನೆವರೆಗೆ 109 ಸದಸ್ಯರ ಬೆಂಬಲವಿದೆ ಎನ್ನುತ್ತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣದಲ್ಲೀಗ ಸಂಖ್ಯೆ ಕುಗ್ಗುತ್ತ ನಡೆದಿದೆ. ಪೈಲಟ್ ಬಣ ವಿಡಿಯೋ ಮತ್ತು ಪತ್ರಿಕಾ ಹೇಳಿಕೆ ಮೂಲಕ ತಾವು 30 ಸದಸ್ಯರಿದ್ದಾರೆ ಎಂದು ಪ್ರತಿಪಾದಿಸುತ್ತಿದೆ.

107 ಸದಸ್ಯರ ಬಲ ಹೊಂದಿದ್ದ ಆಡಳಿರೂಢ ಕಾಂಗ್ರೆಸ್ ಸಂಖ್ಯೆ ಈಗ 90ಕ್ಕೆ ಇಳಿದಿದ್ದು, ಇತರ ಪಕ್ಷಗಳ ಸದಸ್ಯರು ಸೇರಿ 100 ಬಲ ಹೊಂದಿದೆ. ಸರಳ ಬಹುಮತಕ್ಕೆ 101 ಸದಸ್ಯರು ಬೇಕು.

Exit mobile version