ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಯಲ್ಲಿ ಪಲ್ಲಟ: 2313 ಪಾಸಿಟಿವ್ ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್

ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಯಲ್ಲಿ ಪಲ್ಲಟ:

ಬೆಂಗಳೂರು: ರಾಜ್ಯದಲ್ಲಿ ಸತತ 7 ದಿನಗಳಿಂದ ಪ್ರತಿದಿನ 1,500ಕ್ಕೂ ಹೆಚ್ಚಿನ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಎರಡು ದಿನಗಳಿಂದ ಅದು 2 ಸಾವಿರ ಗಡಿ ದಾಟುವ ಮೂಲಕ ಆತಂಕ ಸೃಷ್ಟಿಸುತ್ತಿದೆ. ಒಟ್ಟು ಕೇಸುಗಳಲ್ಲಿ ರಾಜಧಾನಿಯಲ್ಲೇ ಅರ್ಧಕ್ಕೂ ಹೆಚ್ಚು ಕೇಸುಗಳು ದಾಖಲಾಗುತ್ತಿದ್ದು, ಬೆಂಗಳೂರು ತೊರೆಯಲು ವಲಸೆ ಕಾರ್ಮಿಕರು ಮುಂದಾಗುತ್ತಿದ್ದಾರೆ.

ರಾಜ್ಯದಲ್ಲಿಂದು 2313 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 33418 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 1003. ಈ ಮೂಲಕ  ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 13836 ಕೇಸ್ ಗಳು. ರಾಜ್ಯದಲ್ಲಿ 19035 ಸಕ್ರೀಯ ಪ್ರಕರಣಗಳಿವೆ. ಇಂದು ಕೊರೊನಾ ಸೋಂಕಿನಿಂದ 57 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 543 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

ಬೆಂಗಳೂರು ನಗರ- 1447

ದಕ್ಷಿಣ ಕನ್ನಡ-139

ವಿಜಯಪುರ- 89

ಬಳ್ಳಾರಿ- 66

ಕಲಬುರಗಿ-58

ಯಾದಗಿರಿ-51

ಮೈಸೂರು-51

ಧಾರವಾಡ-50

ಹಾವೇರಿ-42

ಉಡುಪಿ-34

ಉತ್ತರ ಕನ್ನಡ-33

ಕೊಡಗು-33

ಮಂಡ್ಯ-31

ರಾಯಚೂರು-25

ರಾಮನಗರ-23

ದಾವಣಗೆರೆ- 21

ಬೀದರ್-19

ಗದಗ-19

ಬೆಳಗಾವಿ-15

ಚಿಕ್ಕಬಳ್ಳಾಪೂರ-12

ತುಮಕೂರು-10

ಕೋಲಾರ-09

ಚಾಮರಾಜ ನಗರ-09

ಕೊಪ್ಪಳ-07

ಹಾಸನ-06

ಶಿವಮೊಗ್ಗ-06

ಬಾಗಲಕೋಟೆ-06

ಬೆಂಗಳೂರು ಗ್ರಾಮಾಂತರ-01

ಚಿಕ್ಕಮಗಳೂರು-01

Exit mobile version