ಗದಗ :ಜಿಲ್ಲೆಯಲ್ಲಿ ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 262 ಸೋಂಕು ದೃಢಪಟ್ಟಿವೆ. 165 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 92 ಕೊವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.

ಗದಗ-ಬೆಟಗೇರಿ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆ (ಪಿ-31106) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಬೆಟಗೇರಿಯ ಕುರಟ್ಟಿಪೇಟ ನಿವಾಸಿ 33 ವರ್ಷದ ಪುರುಷ ಪಿ-23122 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 25 ವರ್ಷದ ಮಹಿಳೆ ( ಪಿ-31107), 8 ವರ್ಷದ ಬಾಲಕಿ (ಪಿ-31108) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಬೆಟಗೇರಿಯ ಹೆಲ್ತಕ್ಯಾಂಪ ನಿವಾಸಿ 75 ವರ್ಷದ ಪುರುಷ ಪಿ-25321 ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲೂಕಿನ ಕಣಗಿನಹಾಳ ಗ್ರಾಮದ 26 ವರ್ಷದ ಪುರುಷ (ಪಿ-31109), ಮುಂಡರಗಿ ತಾಲೂಕಿನ ಡೋಣಿ ಗ್ರಾಮದ 24 ವರ್ಷದ ಪುರುಷ (ಪಿ-31110) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಮಹಾರಾಷ್ಟ್ರದ ಪುಣೆÉಯಿಂದ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿ 52 ವರ್ಷದ ಪುರುಷ (ಪಿ-31111), ನಗರದ ಮುಳಗುಂದ ನಾಕಾ ಪ್ರದೇಶದ ನಿವಾಸಿ 25 ವರ್ಷದ ಮಹಿಳೆ (ಪಿ-31112) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಗದಗ-ಬೆಟಗೇರಿ ನಗರದ ಭೀಷ್ಮ ಕೆರೆ ನಿವಾಸಿ 36 ವರ್ಷದ ಮಹಿಳೆ (ಪಿ-31113) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ದೆಹಲಿಯಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ವಾಣಿಪೇಟ ನಿವಾಸಿ 28 ವರ್ಷದ ಪುರುಷ (ಪಿ-31114) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಗದಗ-ಬೆಟಗೇರಿ ನಗರದ ವೀರನಾರಾಯಣ ಬಡಾವಣೆ ನಿವಾಸಿ 33 ವರ್ಷದ ಪುರುಷ ಪಿ-16612 ಸೋಂಕಿತರ ಸಂಪರ್ಕದಿಂದಾಗಿ ಗದಗ ಎ.ಪಿ.ಎಂ.ಸಿ.ಯ ನಿವಾಸಿ 62 ವರ್ಷದ ಪುರುಷ (ಪಿ-31115), 56 ವರ್ಷದ ಮಹಿಳೆ (ಪಿ-31116), 10 ವರ್ಷದ ಬಾಲಕಿ (ಪಿ-31117) 24 ವರ್ಷದ ಪುರುಷ (ಪಿ-31118) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಧಾರವಾಡ ಜಿಲ್ಲೆಯಿಂದ ಆಗಮಿಸಿದ ಶಿರಹಟ್ಟಿ ಪಟ್ಟಣದ ನಿವಾಸಿ 40 ವರ್ಷದ ಪುರುಷ (ಪಿ-31119) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಶಿರಹಟ್ಟಿ ತಾಲೂಕಿನ ಮ್ಯಾಗೇರಿ ಓಣಿ ನಿವಾಸಿ 42 ವರ್ಷದ ಪುರುಷ (ಪಿ-31120) ಇವರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಗದಗ-ಬೆಟಗೇರಿ ನಗರದ ಗಂಗಿಮಡಿ ಪ್ರದೇಶದ ನಿವಾಸಿ 17 ವರ್ಷದ ಪುರುಷ (ಪಿ-31121) ಕೆಮ್ಮು ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಮುಂಡರಗಿ ತಾಲೂಕಿನ ಜಂತ್ಲಿ ಶಿರೂರ ಗ್ರಾಮದ ನಿವಾಸಿ 38 ವರ್ಷದ ಮಹಿಳೆ (31122) ಕೆಮ್ಮು ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಅಂತರ ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಟಗೇರಿಯ ಹೆಲ್ತ ಕ್ಯಾಂಪ ನಿವಾಸಿ 62 ವರ್ಷದ ಪುರುಷ (ಜಿಡಿಜಿ-31783) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಗದಗ ತಾಲೂಕಿನ ಸೀತಾಲಹರಿ ಗ್ರಾಮದ ನಿವಾಸಿ 52 ವರ್ಷದ ಪುರುಷ (ಪಿ-31130) ಕೆಮ್ಮು, ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದ್ದು ಇವರು ದಿ. 09-07-2020 ರಂದು ಮೃತ ಪಟ್ಟಿರುತ್ತಾರೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮನುಕುಲದ ಏಳಿಗೆಗಾಗಿ ಶ್ರಮಿಸಿದ ಸಂತ ಸೇವಾಲಾಲರು

ಶಿರಹಟ್ಟಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಬೆಂಗಳೂರು, ತಾಲೂಕ ಘಟಕ ಶಿರಹಟ್ಟಿ ಹಾಗೂ ಬಂಜಾರ…

ದಾವಣಗೆರೆ ಜಿಲ್ಲೆಯಲ್ಲಿ 21 ಕೊರೋನಾ ಪಾಸಿಟಿವ್: ರಾಜ್ಯದಲ್ಲಿ 642ಕ್ಕೆ ಏರಿಕೆ

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗುತ್ತಿದೆ.

ಮುಂಡರಗಿಗೆ ಬಿಇಓ ನೇಮಕ, ಶಿರಹಟ್ಟಿ ಬಿಇಓ ವರ್ಗಾವಣೆ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿಗೆ ಖಾಲಿ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಯುವರಾಜ್ ನಾಯ್ಕ್ ಅವರನ್ನು…

ಕೋಟೆನಾಡಿನಲ್ಲಿ ಕೇಂದ್ರದ ವಿರುದ್ಧ ಕೈ ಪ್ರತಿಭಟನೆ

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ, ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ 400ಕ್ಕೂ ಅಧಿಕ ಟ್ರಾಕ್ಟರ್ ರ‍್ಯಾಲಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ದಿಂದ ಪ್ರತಿಭಟನೆ ನಡೆಸಲಾಯಿತು.