ರಾಜ್ಯದಲ್ಲಿಂದು ನಿಲ್ಲದ ಕೊರೊನಾ ಸೋಂಕಿನ ಸ್ಪೋಟ : ಇಂದು 1925 ಪಾಸಿಟಿವ್!

covid-19

corona

ಬೆಂಗಳೂರು: ಸತತ 3 ದಿನಗಳಿಂದ 1500ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಕಾಣತ್ತಿರುವ ರಾಜ್ಯದಲ್ಲಿ ಇಂದು 1,925 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿನ ಸ್ಫೋಟ ಮುಂದುವರೆದಿದೆ.

ಈ 3 ದಿನದಲ್ಲಿ ಹಲವಾರು ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಅವರ ಸಂಬಂಧಿಕರು ಮತ್ತು ರಾಜಕೀಯ ಕಾಯಕರ್ತರಿಗೂ ಸೋಂಕು ತಗುಲಿರುವುದು ಸಮುದಾಯದಲ್ಲೂ ಸೋಂಕು ಹರಡಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ್ಯದಲ್ಲಿಂದು 1925 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ ಇಂದು ದಾಖಲೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾದಂತಾಗಿದ್ದಾರೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 23474 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 603. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 9847 ಕೇಸ್ ಗಳು. ರಾಜ್ಯದಲ್ಲಿ 13251 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 37 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 372 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು

ಬೆಂಗಳೂರು ನಗರ- 1235
ದಕ್ಷಿಣ ಕನ್ನಡ- 147
ಬಳ್ಳಾರಿ-90
ವಿಜಯಪುರ-51
ಕಲಬುರಗಿ-49
ಉಡುಪಿ-45
ಧಾರವಾಡ -45
ಬೀದರ್-29
ಮೈಸೂರು-25
ಕೊಪ್ಪಳ-22
ಉತ್ತರ ಕನ್ನಡ-21
ಚಾಮರಾಜ ನಗರ-19
ಹಾವೇರಿ-15
ಹಾಸನ-14
ಚಿಕ್ಕಬಳ್ಳಾಪೂರ್-13
ತುಮಕೂರು-13
ಕೋಲಾರ್-13
ಬೆಳಗಾವಿ-11
ದಾವಣಗೆರೆ-11
ರಾಯಚೂರು-10
ಮಂಡ್ಯ-10
ಚಿಕ್ಕಮಗಳೂರು-09
ಶಿವಮೊಗ್ಗ-08
ಗದಗ-07
ರಾಮನಗರ-06
ಬಾಗಲಕೋಟೆ-04
ಚಿತ್ರದುರ್ಗ-03

Exit mobile version