ಎಲ್ಲರಿಗೂ ಕೊರೋನಾ ವಿಮೆ ಒದಗಿಸಿ: ಎಚ್.ಕೆ. ಪಾಟೀಲ್ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ದಿನೆದಿನೇ ಸೋಂಕಿನ ಹಬ್ಬುವಿಕೆ ಹೆಚ್ಚುತ್ತಿದೆ. 40 ಸಾವಿರ ಪ್ರಕರಣಗಳ ಟೆಸ್ಟ್ ಫಲಿತಾಂಶ ಬಾಕಿಯಿದೆ. ಸಾವಿನ ಆತಂಕವೂ ಹೆಚ್ಚಿದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಎಲ್ಲರಿಗೂ ಕೋವಿಡ್ ವಿಮೆ ಒದಗಿಸಬೇಕು ಎಂದು ಗದಗ ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಸಂಕಷ್ಟದ ಸಮಯದಲ್ಲಿ ಸರಕಾರ ಜನರ ಜೊತೆಗೆ ನಿಲ್ಲಬೇಕು. ಎಲ್ಲರಿಗೂ ವಿಮೆ ಒದಗಿಸಲು 2 ಸಾವಿರ ಕೋಟಿ ರೂಪಾಯಿ ಸಾಕು ಎಂದು ಅವರು ತಿಳಿಸಿದರು.

ಇಂತಹ ಸಂದರ್ಭದಲ್ಲೂ ಪಿಪಿಇ ಕಿಟ್ ಖರೀದಿ ಮತ್ತು ಇತರ ವಿಷಯಗಳಲ್ಲಿ ಭ್ರಷ್ಟಾಚಾರ ನಡೆಸುತ್ತಾರೆ ಎಂದರೆ ನಾಚಿಕೆಗೇಡು. ಜನ ತಿರುಗಿ ಬೀಳುವ ಮುನ್ನ ಸರಕಾರ ಎಚ್ಚರಗೊಳ್ಳಲಿ ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನಂಜಯ್ಯನಮಠ ಉಪಸ್ಥಿತರಿದ್ದರು.

Exit mobile version