ಕಣ್ಣಿನ ಸಮಸ್ಯೆ ಮುಕ್ತಿಗೊಂದು ಮನೆ ಮದ್ದು

ಆಧುನಿಕ ಜಗತ್ತಿಗೆ ಒಡ್ಡಿಕೊಂಡಿರುವ ಬಹುತೇಕರು ಸದ್ಯ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರಣ ಕಂಪ್ಯೂಟರ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ವಸ್ತುಗಳೇ ಸದ್ಯ ಬಹುತೇಕರ ಸಂಗಾತಿಗಳಂತಾಗಿವೆ. ಹೀಗಾಗಿ ಕಣ್ಣಿನ ಸಮಸ್ಯೆ ಪ್ರತಿಯೊಬ್ಬರ ಕಾಮನ್ ಸಮಸ್ಯೆಯಾಗಿ ಬಿಟ್ಟಿದೆ. ಸದ್ಯ ಇದರಿಂದ ಮುಕ್ತಿ ಪಡೆಯುವ ಸಂಗತಿಯೊಂದು ಸಂಶೋಧನೆಯಿಂದ ಹೊರ ಬಂದಿದೆ.

ಪ್ರತಿ ದಿನ ಮೂರು ನಿಮಿಷಗಳ ಕಾಲ ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡುವುದರಿಂದ ದೃಷ್ಟಿ ಸಮಸ್ಯೆ ಸುಧಾರಣೆಯಾಗಲಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ವರದಿಯಂತೆ ದೃಷ್ಟಿ ಸಾಮರ್ಥ್ಯವನ್ನು ಸುಧಾರಣೆ ಮಾಡುವುದಕ್ಕಾಗಿ ಗಾಢ ಕೆಂಪು ಬಣ್ಣದ ಬೆಳಕು ದಿಟ್ಟಿಸಿ ನೋಡಬೇಕು. ಇದು ಮನೆಯ ಮಟ್ಟಿಗೆ ಮಾಡಿಕೊಳ್ಳಬಹುದಾದ ಪ್ರಾಥಮಿಕ ಕಣ್ಣಿನ ಥೆರೆಪಿಯಾಗಲಿದ್ದು, ಸ್ವಭಾವಿಕವಾಗಿ ಕುಸಿಯುವ ದೃಷ್ಟಿ ಸಾಮರ್ಥ್ಯವನ್ನು ಚಿಗುರಿಸುತ್ತದೆ ಎಂದು ತಿಳಿದು ಬಂದಿದೆ.

ಹಲವರಲ್ಲಿ ರೆಟಿನಾ ಜೀವಕೋಶಗಳ ಶಕ್ತಿ ಕುಂದುತ್ತದೆ. ಈ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ ತರಂಗಾಂತರದ ಗಾಢ ಕೆಂಪು ಬಣ್ಣದ ಬೆಳಕನ್ನು ದಿನವೊಂದಕ್ಕೆ 3 ನಿಮಿಷಗಳು ದಿಟ್ಟಿಸಿ ನೋಡಬಹುದು ಎಂಬುದು ನಮ್ಮ ಅಧ್ಯಯನ ವರದಿಯ ಮೂಲಕ ದೃಢಪಟ್ಟಿದೆ ಎಂದು ಬ್ರಿಟನ್ ನಲ್ಲಿರುವ ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಮುಖ್ಯ ಲೇಖಕಿ ಗ್ಲೆನ್ ಜೆಫರಿ ಹೇಳಿದ್ದಾರೆ.

ಮನುಷ್ಯರಲ್ಲಿ 40 ವಯಸ್ಸಿನ ಬಳಿಕ ರೆಟೀನಾದ ಜೀವಕೋಶಗಳ ಶಕ್ತಿ ಸಹ ಕುಂದುತ್ತದೆ. ಇಲಿ ಸೇರಿದಂತೆ ಹಲವು ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. 670 ನ್ಯಾನೋಮೀಟರ್ ನಷ್ಟು ಗಾಢ ಕೆಂಪು ಬಣ್ಣದ ಬೆಳಕನ್ನು ಚೆಲ್ಲಿದಾಗ ಅವುಗಳ ರೆಟೀನಾದ ಫೋಟೊರಿಸೆಪ್ಟರ್ ಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಂಡು ಬಂದಿದೆ.

ಇದೇ ಮಾದರಿಯ ಪ್ರಯೋಗವನ್ನು ಮನುಷ್ಯರ ಮೇಲೆಯೂ ನಡೆಸಲಾಗಿದ್ದು, 28-72 ವರ್ಷಗಳ ನಡುವಿನ 24 (12 ಪುರುಷರ, 12 ಮಹಿಳೆಯರು) ಸಂಶೋಧನೆಗೆ ಒಳಪಡಿಸಲಾಗಿದ್ದು, ಎಲ್ ಇಡಿ ಟಾರ್ಚ್ ನ್ನು ನೀಡಲಾಗಿತ್ತು. ಅದರಲ್ಲಿನ 670 ಎನ್ಎಂ ಬೆಳಕಿನ ಕಿರಣಗಳನ್ನು ದಿನವೊಂದಕ್ಕೆ 3 ನಿಮಿಷಗಳ ಕಾಲ ದಿಟ್ಟಿಸುವಂತೆ ಸೂಚಿಸಲಾಗಿತ್ತು, 40 ವಯಸ್ಸಿನವರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಿರುವುದನ್ನು ಸಂಶೋಧಕರು ಕಂಡಿದ್ದಾರೆ.

Exit mobile version