ಆಧುನಿಕ ಜಗತ್ತಿಗೆ ಒಡ್ಡಿಕೊಂಡಿರುವ ಬಹುತೇಕರು ಸದ್ಯ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರಣ ಕಂಪ್ಯೂಟರ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ವಸ್ತುಗಳೇ ಸದ್ಯ ಬಹುತೇಕರ ಸಂಗಾತಿಗಳಂತಾಗಿವೆ. ಹೀಗಾಗಿ ಕಣ್ಣಿನ ಸಮಸ್ಯೆ ಪ್ರತಿಯೊಬ್ಬರ ಕಾಮನ್ ಸಮಸ್ಯೆಯಾಗಿ ಬಿಟ್ಟಿದೆ. ಸದ್ಯ ಇದರಿಂದ ಮುಕ್ತಿ ಪಡೆಯುವ ಸಂಗತಿಯೊಂದು ಸಂಶೋಧನೆಯಿಂದ ಹೊರ ಬಂದಿದೆ.

ಪ್ರತಿ ದಿನ ಮೂರು ನಿಮಿಷಗಳ ಕಾಲ ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡುವುದರಿಂದ ದೃಷ್ಟಿ ಸಮಸ್ಯೆ ಸುಧಾರಣೆಯಾಗಲಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ವರದಿಯಂತೆ ದೃಷ್ಟಿ ಸಾಮರ್ಥ್ಯವನ್ನು ಸುಧಾರಣೆ ಮಾಡುವುದಕ್ಕಾಗಿ ಗಾಢ ಕೆಂಪು ಬಣ್ಣದ ಬೆಳಕು ದಿಟ್ಟಿಸಿ ನೋಡಬೇಕು. ಇದು ಮನೆಯ ಮಟ್ಟಿಗೆ ಮಾಡಿಕೊಳ್ಳಬಹುದಾದ ಪ್ರಾಥಮಿಕ ಕಣ್ಣಿನ ಥೆರೆಪಿಯಾಗಲಿದ್ದು, ಸ್ವಭಾವಿಕವಾಗಿ ಕುಸಿಯುವ ದೃಷ್ಟಿ ಸಾಮರ್ಥ್ಯವನ್ನು ಚಿಗುರಿಸುತ್ತದೆ ಎಂದು ತಿಳಿದು ಬಂದಿದೆ.

ಹಲವರಲ್ಲಿ ರೆಟಿನಾ ಜೀವಕೋಶಗಳ ಶಕ್ತಿ ಕುಂದುತ್ತದೆ. ಈ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ ತರಂಗಾಂತರದ ಗಾಢ ಕೆಂಪು ಬಣ್ಣದ ಬೆಳಕನ್ನು ದಿನವೊಂದಕ್ಕೆ 3 ನಿಮಿಷಗಳು ದಿಟ್ಟಿಸಿ ನೋಡಬಹುದು ಎಂಬುದು ನಮ್ಮ ಅಧ್ಯಯನ ವರದಿಯ ಮೂಲಕ ದೃಢಪಟ್ಟಿದೆ ಎಂದು ಬ್ರಿಟನ್ ನಲ್ಲಿರುವ ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಮುಖ್ಯ ಲೇಖಕಿ ಗ್ಲೆನ್ ಜೆಫರಿ ಹೇಳಿದ್ದಾರೆ.

ಮನುಷ್ಯರಲ್ಲಿ 40 ವಯಸ್ಸಿನ ಬಳಿಕ ರೆಟೀನಾದ ಜೀವಕೋಶಗಳ ಶಕ್ತಿ ಸಹ ಕುಂದುತ್ತದೆ. ಇಲಿ ಸೇರಿದಂತೆ ಹಲವು ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. 670 ನ್ಯಾನೋಮೀಟರ್ ನಷ್ಟು ಗಾಢ ಕೆಂಪು ಬಣ್ಣದ ಬೆಳಕನ್ನು ಚೆಲ್ಲಿದಾಗ ಅವುಗಳ ರೆಟೀನಾದ ಫೋಟೊರಿಸೆಪ್ಟರ್ ಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಂಡು ಬಂದಿದೆ.

ಇದೇ ಮಾದರಿಯ ಪ್ರಯೋಗವನ್ನು ಮನುಷ್ಯರ ಮೇಲೆಯೂ ನಡೆಸಲಾಗಿದ್ದು, 28-72 ವರ್ಷಗಳ ನಡುವಿನ 24 (12 ಪುರುಷರ, 12 ಮಹಿಳೆಯರು) ಸಂಶೋಧನೆಗೆ ಒಳಪಡಿಸಲಾಗಿದ್ದು, ಎಲ್ ಇಡಿ ಟಾರ್ಚ್ ನ್ನು ನೀಡಲಾಗಿತ್ತು. ಅದರಲ್ಲಿನ 670 ಎನ್ಎಂ ಬೆಳಕಿನ ಕಿರಣಗಳನ್ನು ದಿನವೊಂದಕ್ಕೆ 3 ನಿಮಿಷಗಳ ಕಾಲ ದಿಟ್ಟಿಸುವಂತೆ ಸೂಚಿಸಲಾಗಿತ್ತು, 40 ವಯಸ್ಸಿನವರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಿರುವುದನ್ನು ಸಂಶೋಧಕರು ಕಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಹೊರರಾಜ್ಯಗಳಿಂದ ಬಂದವರ ಮನೆಗಳ ಸೀಲ್ಡೌನ್ ಗೆ ಚಿಂತನೆ.!

ಹೊರರಾಜ್ಯಗಳಿಂದ ಬಂದಿರುವ ವಲಸಿಗರ ಕಾರಣದಿಂದ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಅಂತಹ ವಲಸಿಗರ ಮನೆಗಳನ್ನು ಮಾತ್ರ ಸೀಲ್ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಕ್ಕಳ ಕಲಿಕಾ ಮೇಳ ಸಂಭ್ರಮ…ವೈವಿಧ್ಯ ಪರಿಕಲ್ಪನೆ ಕೌಶಲ್ಯ ಅನಾವರಣ..!

ಆಲಮಟ್ಟಿ: ಅಲ್ಲಿ ಗಣಿತ, ಭಾಷೆ ಸೇರಿ ನಾನಾ ವಿಷಯಗಳ ಕಠಿಣ ಪರಿಕಲ್ಪನೆಗಳನ್ನು ನಾನಾ ಹೊಸ ಹೊಸ…

ನನ್ನ ತೋಳಿನಾಸರೆ ನಿನಗೆ ಸಾಂತ್ವನ ನೀಡಲು ಕಾಯುತಿದೆ

ಪ್ರೇಮದ ಭಾಷೆ, ನೆನಪು,ತುಂಟಾಟಗಳ ಆಲಾಪವಾಗುತ್ತಿದೆ. ಸಾಂತ್ವಾನ ನೀಡಲು ತೋಳಿನಾಸರೆ ಸಖನಿಗಾಗಿ ಕಾಯುತ್ತಿವೆ. ಕಾಳಜಿ, ಪ್ರೀತಿ, ವಿಶ್ವಾಸ ಕಥೆಯ ಸಾರವಾಗಿದೆ. ಕಲ್ಪನಾ ಸಾಗರ್ ಅವರ ಲೇಖನವನ್ನು ನೀವು ಓದಿ…

ಪ್ರವಾಸಿಗರಿಂದ ಸೋಂಕು ಹರಡದಂತೆ ಮಾರ್ಗಸೂಚಿ: ಕೆ.ಸುಧಾಕರ್

ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಂದ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ನೂತನ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.