ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಬುಧವಾರದ ವರೆಗೆ ಸೋಂಕು ಪತ್ತೆಯಾದ 57 ಪ್ರದೇಶಗಳನ್ನು ಸರ್ಕಾರದ ನಿರ್ದೇಶನದಂತೆ ಪ್ರತಿಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪೈಕಿ ಸೋಂಕು ಪತ್ತೆಯಾಗದ 9 ಪ್ರತಿಬಂಧಿತ (ಕಂಟೈನ್ಮೆಂಟ್) ಪ್ರದೇಶಗಳನ್ನು ಸಾಮಾನ್ಯ ವಲಯಗಳಾಗಿ ಪರಿವರ್ತಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ 48 ಸಕ್ರಿಯ ಪ್ರತಿಬಂಧಿತ ಪ್ರದೇಶಗಳಿದ್ದು, ಅವುಗಳ ವಿವರ ಇಂತಿದೆ.

ಸಕ್ರಿಯ ಪ್ರತಿಬಂಧಿತ ಪ್ರದೇಶಗಳು ಗದಗ-ಬೆಟಗೇರಿಯ ಸೆಟ್ಲಮೆಂಟ್ (ಗಾಂಧಿ) ನಗರದ ವಾರ್ಡ್ ಸಂಖ್ಯೆ 02, ಎಸ್.ಎಂ.ಕೃಷ್ಣ ನಗರ, ನಂದೀಶ್ವರ ನಗರ ವಾರ್ಡ್ ಸಂ.35, ಲಕ್ಷಣಸಾ ನಗರ ವಾರ್ಡ್ ಸಂ.35, ಸಿದ್ಧರಾಮೇಶ್ವರ ನಗರ ವಾರ್ಡ್ ಸಂ.34 ಮತ್ತು 35 ನಿರ್ಬಂಧಿತ ಪ್ರದೇಶಗಳಾಗಿವೆ.

ತಾಲ್ಲೂಕಿನ ಕೋಟುಮಚಗಿ ಗ್ರಾಮದ ವಾರ್ಡ್ ಸಂ.1 ಮತ್ತು 2, ಹರ್ತಿ ಗ್ರಾಮದ ನಾವಳ್ಳಿ ಓಣಿ ವಾರ್ಡ್ ಸಂ.1 ಮತ್ತು ಹೊರಪೇಟೆ ನಗರ ವಾರ್ಡ್ ಸಂ.3, ಕುರುಡಗಿ ವಾರ್ಡ್ ಸಂ.2, ಮಲ್ಲಸಮುದ್ರ, ಹೊಂಬಳ, ಕಣವಿ ಹೊಸೂರು, ಯಲಿಶಿರೂರ ಗ್ರಾಮದ ವಾರ್ಡ್ ಸಂ.2, ಕುರ್ತಕೋಟಿ ಗ್ರಾಮದ ಆಶ್ರಯ ಪ್ಲಾಟ್ ಹಾಗೂ ಕಳಸಾಪುರ ಗ್ರಾಮದ ತೇಜಾ ನಗರ ಕೋವಿಡ್-19 ಸೋಂಕು ಪತ್ತೆಯಾಗಿರುವ ಕಾರಣದಿಂದಾಗಿ ಪ್ರತಿಬಂಧಿತ ಪ್ರದೇಶಗಳಾಗಿವೆ.

ಶಿರಹಟ್ಟಿ ತಾಲ್ಲೂಕಿನ ಮಟ್ಟಿಬಾವಿ ಪ್ರದೇಶದ ವಾರ್ಡ್ ಸಂ.6, ಮಜ್ಜೂರ ತಾಂಡಾ, ಬಿ.ಡಿ.ತಟ್ಟಿ ಶಾಲೆ, ಬಜಾರ್ ರಸ್ತೆಯ ವಾರ್ಡ್ ಸಂ.6 ಮತ್ತು 9, ಬ್ರಾಹ್ಮಿಣ್ ಓಣಿ ವಾರ್ಡ್ ಸಂ. 10, ಮ್ಯಾಗೇರಿ ಓಣಿ ವಾರ್ಡ್ ಸಂ.4, ಛಬ್ಬಿ, ಛಬ್ಬಿ ಗ್ರಾಮ ಪಂಚಾಯತ್, ಬನ್ನಿಕೊಪ್ಪ, ಬಾಲೇಹೊಸೂರು.

ಮುಂಡರಗಿ ಪಟ್ಟಣದ ಅಂಬಾಭವಾನಿ ದೇವಸ್ಥಾನ, ನೇಕಾರ ಓಣಿ, ವಿದ್ಯಾನಗರ ವಾರ್ಡ್ ಸಂ.18, ಹುಡ್ಕೋ ಕಾಲೋನಿಯ ವಾರ್ಡ್ ಸಂ.7, ಡಂಬಳ ಗ್ರಾಮದ ಸರ್ವೇ ಸಂ.194, ಡಂಬಳ, ಪಟ್ಟಣದ ಗರಡಿ ಮನೆ ವಾರ್ಡ್ ಸಂ.14, ಪಿಡಬ್ಲ್ಯೂಡಿ ಕ್ವಾಟ್ರಸ್ ವಾರ್ಡ್ ಸಂ.19, ಬಸವೇಶ್ವರ ನಗರದ ವಾರ್ಡ್ ಸಂ.6, ಉಪ್ಪಿನ ಬೆಟಗೇರಿ ಪ್ರದೇಶದ ಎನ್‌ಎ ಪ್ಲಾಟ್ ವಾರ್ಡ್ ಸಂ.17, ಬೆಣ್ಣಿಹಳ್ಳಿ.

ರೋಣ ತಾಲ್ಲೂಕಿನ ಇಟಗಿ, ಪಟ್ಟಣದ ಕಲ್ಯಾಣ ನಗರ, ಇಟಗಿ ಗ್ರಾಮದ ವಾರ್ಡ್ ಸಂ.4, ಮೆಣಸಗಿ, ಬೆಳವಣಕಿ ಗ್ರಾಮಗಳು. ನರಗುಂದ ಪಟ್ಟಣದ ಸೀತನ ಬಾವಿ ಓಣಿ ಹಾಗೂ ಲಕ್ಷ್ಮೇಶ್ವರ ಪಟ್ಟಣದ ವಾರ್ಡ್ ಸಂ.12ನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.

ಪ್ರತಿಬಂಧಿತ ಪ್ರದೇಶಗಳಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ವಯ ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ 9 ನಿರ್ಬಂಧಿತ ಪ್ರದೇಶಗಳನ್ನು ಸಾಮಾನ್ಯ ವಲಯಗಳಾಗಿ ಘೋಷಿಸಲಾಗಿದ್ದು, ಅವುಗಳ ವಿವರ ಇಂತಿದೆ.

ಸಾಮಾನ್ಯ ವಲಯಗಳು ಗದಗ ನಗರದ ರಂಗನವಾಡಿ, ಗಂಜಿ ಬಸವೇಶ್ವರ ವೃತ್ತ, ಹುಡ್ಕೋ ಕಾಲೋನಿ, ಪಂಚಾಕ್ಷರಿ ನಗರ ವಾರ್ಡ್ ಸಂ.28, ಸೇವಾಲಾಲ್ ನಗರ ವಾರ್ಡ್ ಸಂ.35, ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂ.8 ಮತ್ತು 11, ರೋಣ ತಾಲ್ಲೂಕಿನ ಹೊಳೆ ಆಲೂರ ಗ್ರಾಮದ ವಾರ್ಡ್ ಸಂ.8 ಹಾಗೂ ಕೃಷ್ಣಾಪುರ ಗ್ರಾಮವು ಸಾಮಾನ್ಯ ವಲಯಗಳಾಗಿ ಮಾರ್ಪಾಡಾಗಿವೆ.

Leave a Reply

Your email address will not be published. Required fields are marked *

You May Also Like

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ವಿಶ್ವ ಸಂಸ್ಥೆ ಭದ್ರತಾ ಸಮಿತಿಗೆ ಭಾರತ ತಾತ್ಕಾಲಿಕ‌ ಸದಸ್ಯ

ನ್ಯೂಯಾರ್ಕ್‌: ಚೀನಾದೊಂದಿಗೆ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲಿಯೇ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ತಾತ್ಕಾಲಿಕ ಸದಸ್ಯತ್ವ…

ಉತ್ತರದ ಜನ ಮತ್ತೆ ನೆರೆಗೆ ತತ್ತರ!: ರಸ್ತೆಯ ಬದಿಯಲ್ಲೆ ಲಖಮಾಪುರ ಜನರ ವಾಸ

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿಯಿಂದಾಗಿ ಗದಗ ಜಿಲ್ಲೆಯ 16 ಹಳ್ಳಿಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ. ನರಗುಂದ ಹಾಗೂ ರೋಣ ತಾಲೂಕಿನ ಹಲವು ಹಳ್ಳಿಗಳ ಜನರಲ್ಲೀಗ ಪ್ರವಾಹ ಆತಂಕ ಸೃಷ್ಟಿಯಾಗಿದೆ.

ಗದಗ ಜಿಲ್ಲೆಯಾದ್ಯಂತ ನಿರಂತರ ಮಳೆ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

ಉತ್ತರಪ್ರಭ ಗದಗ: ಗದಗ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಇಂದು…