ಚೀನಾ ಟೆನ್ಷನ್: ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ದೆಹಲಿ: ಲಡಾಖ್ ನ ಗಲ್ವಾನ್ ವ್ಯಾಲಿ ಕದನದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸರ್ವಪಕ್ಷಗಳ ಸಭೆಯನ್ನು ಆನ್ಲೈನ್ ಮೂಲಕ ನಡೆಸಿದರು.

ಸಭೆಯಲ್ಲಿ ಸುಮಾರು 20 ಪಕ್ಷಗಳು ಭಾಗವಹಿಸಿದ್ದವು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿವಿಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಈ ವೇಳೆ ಮಡಿದ ಯೋಧರಿಗೆ ಅಂತಿಮ ನಮನವನ್ನು ಸಲ್ಲಿಸಲಾಯಿತು.
ಆದರೆ, ಈ ಕುರಿತು ತಕರಾರು ತೆಗೆದಿರುವ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್, ರಾಷ್ಟ್ರೀಯ ಜನತಾ ದಳ ಬಿಹಾರದಲ್ಲಿ ಅತ್ಯಂತ ದೊಡ್ಡ ಪಕ್ಷ ಮತ್ತು 5 ಲೋಕಸಭೆ ಸದಸ್ಯರನ್ನು ಹೊಂದಿದೆ. ಆದರೆ, ನಮ್ಮನ್ನು ಸರ್ವ ಪಕ್ಷಗಳ ಸಭೆಗೆ ಆಹ್ವಾನಿಸಿಲ್ಲ. ನಮ್ಮನ್ನು ಏಕೆ ಸಭೆಗೆ ಆಹ್ವಾನಿಸಿಲ್ಲ ಎಂಬುದರ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು.
ಅನಂತರ ದೆಹಲಿಯಲ್ಲಿ ಮನೋಜ್ ಜ್ಹಾ ಮತ್ತು ಮಿಸಾ ಭಾರ್ತಿ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಕ್ರಿಯಿಸಿದ ಮನೋಜ್, ಸರ್ವ ಪಕ್ಷಗಳ ಸಭೆಗೆ ನಮಗೆ ಆಹ್ವಾನ ನೀಡದಿರುವುದಕ್ಕೆ ನಮಗೆ ಅಸಮಾಧಾನವಾಗಿದೆ ಎಂದರು.
ಇಂದಿನ ಸಭೆಯಲ್ಲಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ಎನ್ ಸಿ ಪಿ ನಾಯಕ ಶರದ್ ಪವಾರ್, ಸಿಕ್ಕಿಂ ಸಿಎಂ ಪ್ರೇಮ್ ಸಿಂಗ್, ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಸಿಪಿಐ ನಾಯಕ ಡಿ.ರಾಜಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೊದಲಾದವರು ಭಾಗವಹಿಸಿದ್ದರು.

Exit mobile version