ಕೊರೊನಾ ಪರೀಕ್ಷೆ: ದೇಶಾದ್ಯಂತ ಸಮಂಜಸ ದರ ನಿಗದಿಗೆ ಸುಪ್ರೀಂ ಸೂಚನೆ

ದೆಹಲಿ: ಕೊರೊನಾ ಪರೀಕ್ಷೆಗೆ ಸಮಂಜಸ ದರ ನಿಗದಿಮಾಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭೂಷಣ್ ಹೇಳಿದ್ದಾರೆ. ದೇಶಾದ್ಯಂತ ಕೊರೊನಾ ಪರೀಕ್ಷೆಗೆ ಏಕರೂಪತೆ ಇರಬೇಕು. ಜೊತೆಗೆ, ವಾರ್ಡ್ ಗಳಲ್ಲಿ ಸಿಸಿಟಿವಿ ಇರಿಸಬೇಕು ಎಂದು ಕೂಡ ಕೋರ್ಟ್ ಹೇಳಿದೆ.
ದೇಶಾದ್ಯಂತ ಕೊರೊನಾ ವ್ಯಾಪಕವಾಗಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣದಡಿ ಕೊರೊನಾ ರೋಗಿಗಳಿಗೆ ಮತ್ತು ಕೊರೊನಾ ಕಾರಣದಿಂದ ಮಡಿದವರ ಶವ ಸಂಸ್ಕಾರ ಮಾರ್ಗಸೂಚಿಗಳ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಈ ವೇಳೆ, ಪರಿಣತರ ತಂಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದಿತು. ಜೊತೆಗೆ, ರೋಗಿಗಳ ಚಿಕಿತ್ಸೆಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕು ಮತ್ತು ಶವಸಂಸ್ಕಾರ ವಿಷಯದಲ್ಲಿ ಯಾವುದೇ ಅಡ್ಡಿಗಳಾಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Exit mobile version