ಹೊಸದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ 76 ಜನ ಭಾರತೀಯ ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಅವರಿಗೆ ಗಂಭೀರ ಗಾಯಗಳಿಲ್ಲ. ಎಲ್ಲರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 18 ಜನ ಯೋಧರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು ಅವರಿಗೆ 15 ದಿನಗಳ ರಜೆ ನೀಡಲಾಗಿದೆ. ಇನ್ನುಳಿದ 56 ಜನ ಯೋಧರು ಒಂದು ವಾರದಲ್ಲಿ ಮರಳಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಗಲ್ವಾನ್‌ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಬಿ.ಕೆ.ಸಂತೋಷ್‌ ಬಾಬು ಅವರ ತಂಡ, ಚೀನಾ ಪಡೆಗಳ ಟೆಂಟ್‌ಗಳನ್ನು ತೆಗೆಯುವುದಕ್ಕೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 20 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಅಲ್ಲದೇ, ಚೀನಾದ 45 ಜನ ಸೈನಿಕರು ಸಾವನ್ನಪ್ಪಿದ್ದರು ಎಂದು ಸೇನಾಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You May Also Like

SBI ಗ್ರಾಮಸೇವಾ ಕೇಂದ್ರ ಉದ್ಘಾಟನೆ: ಸಶಕ್ತಿಕರಣದ ಮೂಲ ಉದ್ದೇಶ ಸಾಕಾರವಾದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ

ಮುಂಡರಗಿ: ಸರ್ಕಾರದ ಯೋಜನೆಗಳು ಹಾಗು ಸೌಲಭ್ಯಗಳು ಸಾಕಷ್ಟು ಇವೆ. ಆದರೆ ಅವುಗಳ ಸದ್ಭಳಕೆಯಾಗಬೇಕು. ಮುಖ್ಯವಾಗಿ ಸಶಕ್ತಿಕರಣದ…

ಮಲಗಿದೆ ರಾಜ್ಯ ಮಾಹಿತಿ ಹಕ್ಕು ವೆಬ್ ಸೈಟ್!: ಮಾಹಿತಿ ಮುಚ್ಚಿಡುವ ಯತ್ನದ ಆರೋಪ

ಜನರಿಗೆ ಮಾಹಿತಿ ಒದಗಿಸಲೆಂದೇ ಮಾಹಿತಿ ಹಕ್ಕು ಜಾರಿಗೆ ಬಂದಿದೆ. ಆದರೆ, ಜನರು ಬಯಸುವ ಮಾಹಿತಿ ನೀಡಲು ಮಾಹಿತಿ ಹಕ್ಕು ಆಯೋಗ ಹಿಂದೇಟು ಹಾಕುತ್ತಿದೆಯೇ ಎಂಬ ಸಂದೇಹ ಬರುವಂತಾಗಿದೆ. ಕಳೆದ ಒಂದು ತಿಂಗಳಿಂದ ರಾಜ್ಯದ ಮಾಹಿತಿ ಹಕ್ಕು ಅಂತರ್ಜಾಲ ತಾಣ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರ್ಜಿ ಹಾಕಲು ಬಯಸುವವರು ನಿರಾಶರಾಗಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ.

ಕನ್ನಡ ನಾಡು ನುಡಿಗೆ ಜಕ್ಕಲಿ ಗ್ರಾಮದ ಕೊಡುಗೆ ಅಪಾರ :ವಿವೇಕಾನಂದಗೌಡ ಪಾಟೀಲ

ಉತ್ತರಪ್ರಭ ಸುದ್ದಿ ನರೆಗಲ್ಲ: ಕನ್ನಡ ನಾಡು ನುಡಿಗೆ ಗದಗ ಜಿಲ್ಲೆಯ ಜಕ್ಕಲಿ ಗ್ರಾಮ ಅಪಾರವಾದ ಕೊಡುಗೆ…

ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ನ ಶ್ರೀರಕ್ಷೆ ಇದೆ – ಹೊರಟ್ಟಿ!

ಚಿಕ್ಕಬಳ್ಳಾಪುರ : ಬಿಜೆಪಿಯ ಹೈಕಮಾಂಡ್ ತಮ್ಮ ಅಭಿಪ್ರಾಯವನ್ನು ಯತ್ನಾಳ್ ಅವರ ಮೂಲಕ ಹೇಳಿಸುತ್ತಿದೆ ಎಂದು ಶಾಸಕ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.