ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಮಾಡಿ ರೂ.67 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದಡಿ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರೂ.67 ಕೋಟಿ ಮೊತ್ತದ ಸಾಲ ಮಾಡಿ ವಂಚನೆ ಮಾಡಿರುವ ಆರೋಪದಡಿ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅಷ್ಟೇ ಅಲ್ಲದೇ ಈ ಹಿಂದಿನ ಅವ್ಯಾನ್ ಓವರ್ಸೀಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಕೆಬಿಜೆ ಹೊಟೆಲ್ಸ್ ಗೋವಾ ಸಂಸ್ಥೆಗಳನ್ನೂ ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ.

ಆದರೆ, ನನ್ನ ಮೇಲಿನ ಆರೋಪ ಶುದ್ಧ ಸುಳ್ಳು ಎಂದು ಮೋಹಿತ್ ಕಾಂಬೋಜ್ ನಿರಾಕರಿಸಿದ್ದಾರೆ. ಸಂಸ್ಥೆಯ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2018 ರಲ್ಲೇ ಒನ್ ಟೈಮ್ ಸೆಟಲ್ಮೆಂಟ್ ಮಾಡಿಕೊಂಡಿದ್ದು, ಆಗಲೇ ರೂ. 30 ಕೋಟಿ ನೀಡಲಾಗಿದೆ. ಬಾಕಿ ಉಳಿಸಿಕೊಂಡಿಲ್ಲ ಎಂಬ ಪ್ರಮಾಣಪತ್ರ ನೀಡಿದ ಬಳಿಕ ಎರಡು ವರ್ಷಗಳ ನಂತರ ಬ್ಯಾಂಕ್ ಈ ಆರೋಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಬೋಜ್ ಅವರು ಗ್ಯಾರೆಂಟರ್ ಹಾಗೂ ಹ್ಯಾಂಡ್ ಕ್ರಾಫ್ಟ್ ಚಿನ್ನಾಭರಣಗಳನ್ನು ದುಬೈ, ಸಿಂಗಪೂರ್, ಹಾಂಕ್ ಕಾಂಗ್ ಹಾಗೂ ಇತರ ರಾಷ್ಟ್ರಗಳಿಗೆ ರಫ್ತು ಮಾಡವ ಅವ್ಯಾನ್ ಓವರ್ ಸೀಸ್ ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು ಎಂದು ಬ್ಯಾಂಕ್ ಆರೋಪಿಸಿದೆ. ಈ ವಂಚನೆ, ಫೋರ್ಜರಿ, ಕ್ರಿಮಿನಲ್ ಷಡ್ಯಂತ್ರಗಳ ಆರೋಪದ ಆಧಾರದಲ್ಲಿ ಸಿಬಿಐ ಕಾಂಬೋಜ್ ಸೇರಿದಂತೆ ಇತರ ಆರೋಪಿಗಳ ಕಚೇರಿಯ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಖರ್ಗೆ

ಇದೇ 19ರಂದು ರಾಜ್ಯದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಇಂದು ನಾಮಪತ್ರ ಸಲ್ಲಿಸಿದರು.

ಪ್ರಾಣಿ ಪ್ರೇಮ ತೋರಿದ ಡಿಬಾಸ್

ಡಿಬಾಸ್ ದರ್ಶನ್ ಇದೀಗ ಪ್ರಾಣಿ ಪ್ರೇಮ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ. ಎತ್ತೊಂದರ ಚಿಕಿತ್ಸೆಗೆ ನೆರವಾಗುವ ಮೂಲಕ ತಮ್ಮಲ್ಲಿರುವ ಪ್ರಾಣಿಗಳ ಬಗೆಗಿರುವ ಕಾಳಜಿಯನ್ನು ತೋರಿಸಿದ್ದಾರೆ.

ರೈತರಿಂದ ಗ್ರಾಹಕರಿಗೆ ನೇರ ಮಾರಾಟಕ್ಕೆ ಕ್ರಮ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ

ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆರೆಯಲಾದ ಮಳಿಗೆಗಳ ವಿವರ ಇಲ್ಲಿದೆ ನೋಡಿ

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…