ದೇಶದಲ್ಲಿ 11,458 ಹೊಸ ಕೊರೊನಾ ಪ್ರಕರಣ: 3 ಲಕ್ಷ ದಾಟಿದ ಸೋಂಕಿತರು

corona

corona state update

ದೆಹಲಿ: ಭಾರತದಲ್ಲಿ ಕೊರೋನಾ ಸೋಂಕು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಸತತವಾಗಿ 10 ಸಾವಿರ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಇಂದು ದೇಶದ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 11,458 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆಯಾಗಿದೆ. ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 8,884ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 386 ಜನ ಕೊರೊನಾಗೆ ಬಲಿಯಾಗಿದ್ದಾರೆ. ಈ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆಯಲ್ಲಿ ಹಂಚಿಕೊಳ್ಳಲಾಗಿದೆ.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,08,993ಕ್ಕೆ ಏರುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ 4ನೇ ಸ್ಥಾನಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,45,779 ಇದ್ದು, 1,54,329 ಜನ ಚಿಕಿತ್ಸೆಯಿಂದ ಗುಣವಾಗಿ ಮನೆಗೆ ತೆರಳಿದ್ದಾರೆ. ಇವರ ಪೈಕಿ ಒಬ್ಬರು ವಲಸೆ ಹೋಗಿದ್ದಾರೆ. ಇದುವರೆಗೆ ದೇಶದಲ್ಲಿ ಶೇ. 49.9ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


ಬಲಿಯಾದವರು ಎಲ್ಲಿಯವರು?

ದೆಹಲಿ 129
ಮಹಾರಾಷ್ಟ್ರ 127
ಗುಜರಾತ್ 30
ಉತ್ತರಪ್ರದೇಶ 20
ತಮಿಳುನಾಡು 18
ಪಶ್ಚಿಮ ಬಂಗಾಳ 9
ತೆಲಂಗಾಣ 9
ಮಧ್ಯಪ್ರದೇಶ 9
ಕರ್ನಾಟಕ 9
ರಾಜಸ್ಥಾನ 9
ಪಂಜಾಬ್ 4
ಅಸ್ಸಾಂ 2
ಕೇರಳ 1
ಕಾಶ್ಮೀರ 1
ಒಡಿಶಾ 1

ಮೇಲಿನ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.

Exit mobile version