ಮಹಿಳಾ ವಿಶ್ವಕಪ್ ಆತಿಥ್ಯ ವಹಿಸಿದ ಭಾರತ!

ನವದೆಹಲಿ: 2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ಭಾರತಕ್ಕೆ ಲಭಿಸಿದೆ. 1979ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹತ್ವದ ಫುಟ್ಬಾಲ್ ಕ್ರಿಡಾಕೂಟ ನಡೆಯಲಿದೆ. ಏಷ್ಯನ್ ಫುಟ್ಬಾಲ್ ಒಕ್ಕೂಟ(ಎಎಫ್‌ಸಿ) ಮಹಿಳಾ ಫುಟ್‌ಬಾಲ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫೆಬ್ರವರಿಯಲ್ಲಿ, ಎಎಫ್‌ಸಿ ಮಹಿಳಾ ಫುಟ್‌ಬಾಲ್ ಸಮಿತಿಯು ಭಾರತವನ್ನು ಆತಿಥ್ಯ ವಹಿಸಲು ಶಿಫಾರಸು ಮಾಡಿತ್ತು.

ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಲಿದ್ದು ಈ ಹಿಂದಿನ ಎಂಟು ತಂಡಗಳಿಂದ ಹನ್ನೆರಡಕ್ಕೆ ವಿಸ್ತರಿಸಿದೆ. ಈ ಪಂದ್ಯಾವಳಿಯು 2023 ರ ಫಿಫಾ ಮಹಿಳಾ ವಿಶ್ವಕಪ್‌ನ ಅಂತಿಮ ಅರ್ಹತಾ ಪಂದ್ಯಾವಳಿಯಾಗಿರಲಿದೆ. ಎಎಫ್‌ಸಿ ಮಹಿಳಾ ಏಷ್ಯನ್ ಕಪ್ 2022 ಫೈನಲ್‌ಗಳ ಆತಿಥೇಯ ಹಕ್ಕುಗಳನ್ನು ಸಮಿತಿಯು ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟಕ್ಕೆ ನೀಡಿದೆ. 2022 ರಲ್ಲಿ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ಗೆ ಆತಿಥ್ಯ ವಹಿಸಲು ನಮ್ಮನ್ನು ಆಯ್ಕೆ ಆಡಿದ್ದಕ್ಕಾಗಿ ಏಷ್ಯನ್ ಫುಟ್‌ಬಾಲ್ ಒಕ್ಕೂಟಕ್ಕೆ ನಾವು  ಧನ್ಯವಾದ ಹೇಳಲಿದ್ದೇವೆ ಎಂದು ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.

Exit mobile version