ಸರ್ಕಾರದ ಅಸಡ್ಡೆ – ಯಾದಗಿರಿಯಲ್ಲಿ ಹೆಚ್ಚಿದ ಆತಂಕ!

ಯಾದಗಿರಿ: ಮಹಾರಾಷ್ಟ್ರದ ಕೊರೊನಾದಿಂದಾಗಿ ಜಿಲ್ಲೆಯ ಜನರು ಕಂಗೆಟ್ಟು ಹೋಗಿದ್ದಾರೆ. ಸದ್ಯ ಮತ್ತೊಂದು ತಲೆನೋವು ಶುರುವಾಗಿದೆ. ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಮನೆಗೆ ಕಳುಹಿಸಿದ ಪರಿಣಾಮ ಜಿಲ್ಲೆಯ ಜನರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಟೆಸ್ಟ್ ವರದಿ ಬರುವ ಮುನ್ನವೇ ಮಹಾರಾಷ್ಟ್ರದಿಂದ ಬಂದವರನ್ನು ಮನೆಗೆ ಕಳುಹಿಸಲಾಗಿದೆ. ಹೋಮ್ ಕ್ವಾರಂಟೈನ್ ನಲ್ಲಿದ್ದ ನಗರದ ವಿವಿಧ ವಾರ್ಡ್ ಗಳಲ್ಲಿನ 18 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಜನರು ಕ್ವಾರಂಟೈನ್ ನಲ್ಲಿದ್ದರೂ ನಿಯಮ ಉಲ್ಲಂಘಿಸಿ ವಿವಿಧೆಡೆ ಸಂಚಾರ ಮಾಡಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತಕ್ಕೆ ತಲೆ ನೋವು ಶುರುವಾಗಿದೆ.
ನಗರದ ತಪಾಡಗೇರಾದಲ್ಲಿನ ಒಂದೇ ಕುಟುಂಬದ 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಕೋಳಿವಾಡದ ಇಬ್ಬರಿಗೆ, ಲಕ್ಷ್ಮೀನಗರದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಹೋಮ್ ಕ್ವಾರಂಟೈನ್ ನಲ್ಲಿದ್ದವರು. ಹೀಗಾಗಿ ಇವರ ಓಡಾಟದ ಬಗ್ಗೆ ತಲೆ ನೋವು ಶುರುವಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಲಕ್ಷ್ಮಿ ನಗರ ಹಾಗೂ ಕೋಳಿವಾಡ ಬಡವಾವಣೆಯ 100 ಮೀಟರ್ ವ್ಯಾಪ್ತಿಯನ್ನು ಕಂಟ್ಮೋನೆಂಟ್ ಝೋನ್ ಎಂದು ಘೋಷಣೆ ಮಾಡಿ, ಸೀಲ್ ಡೌನ್ ಮಾಡಲಾಗಿದೆ.

Exit mobile version