ಚಂಡಮಾರುತ ಎಲ್ಲಿ ಅಪ್ಪಳಿಸಲಿದೆ ಅಂತ ಹೇಳಿದೆ ಹವಾಮಾನ ಇಲಾಖೆ..!

ದೆಹಲಿ: ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ನಿಸರ್ಗ ಚಂಡಮಾರುತ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಬಾಧಿಸಲಿದೆ. ಈಗಾಗಲೇ ಗುಜಾರಾತ್ ಮತ್ತು ಮಹಾರಾಷ್ಟ್ರದೆಡೆಗೆ ಚಂಡಮಾರುತ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ವಾರ ಪಶ್ಚಿಮ ಬಂಗಾಳವನ್ನು ಕಾಡಿದ್ದ ಆಂಫನ್ ಚಂಡಮಾರುತದ ಹಾವಳಿ ಇಳಿಯುವ ಹೊತ್ತಿಗೆ ಇದೀಗ ದೇಶದಲ್ಲಿ ಮತ್ತೆರೆಡು ರಾಜ್ಯಗಳಿಗೆ ನಿಸರ್ಗ ಚಂಡಮಾರುತ ದಾಂಗುಡಿ ಇಡಲಿದೆ. ಇನ್ನು ಇದಕ್ಕೂ ಮುನ್ನ ಮೇ 3ರಂದು ಬಾಂಗ್ಲಾವನ್ನು ಪೀಡಿಸಿದ್ದ ಫನಿ ಚಂಡಮಾರುತ, ಒಡಿಶಾದಲ್ಲೂ ಅಟಾಟೋಪ ತೋರಿಸಿ, ಭೂಕುಸಿತಕ್ಕೆ ಕಾರಣವಾಗಿತ್ತು. ಜೊತೆಗೆ, ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಹಾನಿಯನ್ನುಂಟುಮಾಡಿತ್ತು.

Exit mobile version