ನವದೆಹಲಿ: ಎನ್ ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದ ನಂತರ ಮೊದಲ ಸಂಪುಟ ಸಭೆ ನಡೆದಿದೆ. ಸಂಪುಟ ಸಭೆಯ ಬಳಿಕ ಕೈಗೊಳ್ಳಲಾದ ನಿರ್ಣಯಗಳ ಕುರಿತು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ನಿತಿನ್ ಗಡ್ಕರಿ ವಿಸ್ತೃತ ಮಾಹಿತಿ ನೀಡಿದರು.

ಎಂಎಸ್‌ಎಂಇಗಳಿಗೆ ಎರಡು ಪ್ಯಾಕೇಜ್‌ಗಳ ಜಾರಿಗಾಗಿ ಕಾರ್ಯವಿಧಾನಗಳು ಮತ್ತು ಮಾರ್ಗನಕ್ಷೆಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಎಂಎಸ್ ಎಂಇಗಳಿಗೆ  20 ಸಾವಿರ ಕೋಟಿ ರೂ.ಗಳ ಅಧೀನ ಸಾಲಕ್ಕೆ ಅನುಮೋದನೆ ನೀಡಲಾಗಿದೆ.ಇದರಿಂದ 2 ಲಕ್ಷ ಸಂಕಷ್ಟಕ್ಕೊಳಗಾಗಿರುವ ಸಣ್ಣ ಉದ್ಯಮಿಗಳಿಗೆ ನೆರವಾಗಲಿದೆ ಎಂದರು. ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಮೂಲಕ ಎಂಎಸ್‌ಎಂಇ ವಲಯಕ್ಕೆ ಶಕ್ತಿ ತುಂಬಲು ಈ ಕ್ರಮ ಹಾದಿ ಮಾಡಿಕೊಡಲಿದೆ ಎಂದು ಗಡ್ಕರಿ ಹೇಳಿದರು.

ಮಧ್ಯಮ ಉದ್ಯಮಗಳ ವಹಿವಾಟು ಮಿತಿಯನ್ನು 250 ಕೋಟಿ ರೂ.ಗೆ ತಿದ್ದುಪಡಿ ಮಾಡಲಾಗಿದ್ದು, ಹೂಡಿಕೆ ಮಿತಿಯನ್ನು 50 ಕೋಟಿ ರೂ.ಗೆ ಏರಿಸಲಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಕೃಷಿಕ ಸಮುದಾಯದ ಕಲ್ಯಾಣಕ್ಕಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ ಪರಿಹಾರ ಒದಗಿಸಲು 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು (ಎಂಎಸ್‌ಪಿ) ಶೇ. 50 ರಿಂದ ಶೇ.83ರಷ್ಟು ಹೆಚ್ಚಳ ಮಾಡಲಾಗಿದೆ. ರೈತರು ತಾವು ತೆಗೆದುಕೊಂಡಿರುವ ಸಾಲ ಮರುಪಾವತಿಸಲು ಆಗಸ್ಟ್ ವರೆಗೂ ಗಡುವು ನೀಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published.

You May Also Like

ಸ್ವಾಮೀಜಿಯನ್ನು ಮನಸೋ ಇಚ್ಛೆ ಥಳಿಸಿದ ಪೊಲೀಸ್ ಪೇದೆ!

ಸ್ವಾಮೀಜಿಯೊಬ್ಬರಿಗೆ ಪೊಲೀಸ್ ಪೇದೆ ಥಳಿಸಿರುವ ಘಟನೆ ಅಫಜಲ್ ಪುರ ತಾಲೂಕಿನ ಅರ್ಜುಣಗಿ ತಾಂಡಾ ಚೆಕ್ ಪೋಸ್ಟ್ ಬಳಿ ನಡೆದಿದೆ.

ಇನ್ನಾದರೂ ಮೌನ ಮುರಿದು ಜನರ ಪ್ರಶ್ನೆಗಳಿಗೆ ಉತ್ತರಿಸಿ – ರಾಹುಲ್ ಗಾಂಧಿ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಗುಡುಗಿದ್ದಾರೆ.

ಬಾಲಿವುಡ್ ನಟ ರಣ್ವೀರ್ ಗೆ ಕೊರೊನಾ ಸೋಂಕು

ಬಾಲಿವುಡ್ ಖ್ಯಾತ ಸಹನಟ ರಣವೀರ್ ಶೌರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾರಾಯಿ ಅಂಗಡಿ ಆರಂಭದಿಂದ ಶಿಸ್ತು ಮಾಯವಾಗಿದೆ: ಶಾಸಕ ಎಚ್.ಕೆ.ಪಾಟೀಲ್

ಲಾಕ್ ಡೌನ್ ಹಿನ್ನೆಲೆ ಕಳೆದ 45 ದಿನಗಳಿಂದ ಸಾರಾಯಿ ಅಂಗಡಿ ಬಂದ ಇರುವುದರಿಂದ ಜನರಲ್ಲಿ ಶಿಸ್ತು ಇತ್ತು. ಆದರೆ ಕಳೆದ ಎರಡು ದಿನಗಳಿಂದ ಮತ್ತೆ ಸಾರಾಯಿ ಅಂಗಡಿ ಆರಂಭವಾಗಿದ್ದರಿಂದ ಜನರಲ್ಲಿ ಶಿಸ್ತು ಮಾಯವಾಗಿದೆ.