ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 187 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಸದ್ಯ ಗುಣಮುಖರಾದವರನ್ನು ಹೊರತು ಪಡಿಸಿ ಸಕ್ರೀಯ ಪ್ರಕರಣಗಳು ಒಟ್ಟು 2026 ಆಗಿದೆ. ಇಂದು ಗುಣಮುಖರಾಗಿ 110 ಜನ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಒಟ್ಟು 1328 ಜನ ಬಿಡುಗಡೆ ಹೊಂದಿದಂತಾಗಿದೆ. ಕೊರೊನಾ ಸೋಂಕಿನಿಂದ ಇಂದು ಒಬ್ಬರು ಸಾವನ್ನಪ್ಪಿದ್ದು ಒಟ್ಟು ರಾಜ್ಯದಲ್ಲಿ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ ಸೋಂಕಿತರಲ್ಲಿ 117 ಕೇಸ್ ಗಳು ಅಂತರಾಜ್ಯ ಪ್ರಯಾಣದಿಂದ ಹಾಗೂ 3 ಪ್ರಕರಣಗಳು ಅಂತರಾಷ್ಟ್ರೀಯ ಪ್ರವಾಸದಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು
- ಬೆಂಗಳೂರು ನಗರ – 28
- ಕಲಬುರಗಿ – 24
- ಮಂಡ್ಯ – 15
- ಉಡುಪಿ – 73
- ಬೀದರ್- 02
- ದಕ್ಷಿಣ ಕನ್ನಡ – 04
- ವಿಜಯಪುರ-01
- ಬಳ್ಳಾರಿ-03
- ಶಿವಮೊಗ್ಗ- 09
- ಕೋಲಾರ-01
- ಹಾಸನ-16
- ಚಿಕ್ಕಬಳ್ಳಾಪೂರ್-05
- ಬಾಗಲಕೋಟೆ-02
- ಧಾರವಾಡ-02
- ಹಾವೇರಿ-01
- ರಾಮನಗರ-01
