ಬೆಂಗಳೂರು: ಜೂನ್ 30ರವರೆಗೆ ಲಾಕ್ ಡೌನ್ ಮುಂದುವರೆಸಿ ಸರ್ಕಾರ ಆದೇಶಿಸಿದೆ. ಮುಂದುವರೆದ ಲಾಕ್ ಡೌನ್ ನಲ್ಲಿ ಏನೆಲ್ಲ ಆರಂಭವಾಗಲಿವೆ ಎನ್ನುವ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಸಡಿಲಿಕೆಯಾದ ನಿಯಮಗಳು
- ಜೂನ್ 30ರ ವರೆಗೆ ಲಾಕ್ ಡೌನ್ ವಿಸ್ತರಿಸಿ ಆದೇಶ
- ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಪ್ಯೂ
- ಕಂಟೇನ್ಮೆಂಟ್ ಜೋನ್ ಗಳಿಗೆ ಲಾಕ್ ಡೌನ್ ಕಡ್ಡಾಯ
- ಕಂಟೈನ್ಮೆಂಟ್ ಹೊರತು ಪಡಿಸಿ ಉಳಿದೆಡೆ ಅವಕಾಶ
- ಹೋಟೆಲ್ ಹಾಗೂ ರೆಸ್ಟೋರೆಂಟ್ ಮತ್ತು ಆಸ್ಪತ್ರೆ ಸೇವೆಗಳು ಲಭ್ಯ
- ದೇವಾಲಯ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
- ಕಂಟೈನ್ಮೆಂಟ್ ಜೋನ್ ನಿಗದಿ ಪಡಿಸುವುದು ಆಯಾ ಜಿಲ್ಲಾಡಳಿತದ ಜವಾಬ್ದಾರಿ
- ಶಾಪಿಂಗ್ ಮತ್ತು ಮಾಲ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
- ಅಂತರಾಜ್ಯ ಪ್ರವಾಸಕ್ಕೆ ಅನುಮತಿಯ ಅವಶ್ಯಕತೆ ಇಲ್ಲ
- ವಿವಾಹ ಸಮಾರಂಭಕ್ಕೆ 50 ಜನ, ಅಂತ್ಯಕ್ರಿಯೆಗೆ 25 ಜನರಿಗೆ ಮಾತ್ರ ಅವಕಾಶ
- ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಿಗೆ ನಿರ್ಬಂಧ ಮುಂದುವರೆಯುವುದು
- ಶೈಕ್ಷಣಿಕ ಸಂಸ್ಥೆಗಳನ್ನು ಸದ್ಯಕ್ಕೆ ಆರಂಭಿಸುವುದಿಲ್ಲ
- ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳ ಜೊತೆಗೆ ಚರ್ಚಿಸಿ ನಿರ್ಧರಿಸಲಾಗುವುದು