ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿ ಸಮಯದಲ್ಲಿ ನಡೆದಿರಬಹುದಾದಂತಹ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಶಾಸಕ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.
ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವ ಶಾಸಕ ಎಚ್ಕೆ ಪಾಟೀಲ್, ಪಿಪಿಇ ಕಿಟ್ ಹಾಗೂ ಮಾಸ್ಕ್‌ಗಳ ಬೆಲೆ ಹಾಗೂ ಗುಣಮಟ್ಟ, ಮೊದಲೇ ಉಪಯೋಗಿಸಿದ ವೆಂಟಿಲೇಟರ್‌ಗಳನ್ನು ಖರೀದಿಸಿರುವ ಕುರಿತು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಬಹಳಷ್ಟು ದೂರುಗಳು ಬಂದಿದ್ದವು. ಕರೋನಾದಂತಹ ಮಹಾಮಾರಿ ಬಂದಿರುವ ಈ ಸಂದರ್ಭದಲ್ಲಿ ಎಲ್ಲರೂ ಎಷ್ಟು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬಹುದೋ ಅಷ್ಟು ಪ್ರಾಮಣಿಕವಾಗಿ ಇರಬೇಕಾಗುತ್ತದೆ. ಆದರೆ, ಇದರ ತದ್ವಿರುದ್ದವಾಗಿ ಘಟನೆಗಳು ನಡೆದಿವೆ ಎಂದು ದೂರು ಬಂದಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ ಎಂದಿದ್ದಾರೆ.
