ಸ್ವಾಮೀಜಿಯನ್ನು ಮನಸೋ ಇಚ್ಛೆ ಥಳಿಸಿದ ಪೊಲೀಸ್ ಪೇದೆ!

ಕಲಬುರಗಿ: ಸ್ವಾಮೀಜಿಯೊಬ್ಬರಿಗೆ ಪೊಲೀಸ್ ಪೇದೆ ಥಳಿಸಿರುವ ಘಟನೆ ಅಫಜಲ್ ಪುರ ತಾಲೂಕಿನ ಅರ್ಜುಣಗಿ ತಾಂಡಾ ಚೆಕ್ ಪೋಸ್ಟ್ ಬಳಿ ನಡೆದಿದೆ.

ವಿಕಲಚೇತನ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಲ್ಲೆಗೊಳಗಾದವರು. ರೇವೂರ (ಬಿ) ಗ್ರಾಮದ ಚರಮೂರ್ತಿ ಶಿವಯೋಗಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಸಂಜೆ ಭಕ್ತರಿಂದ ಧಾನ್ಯ ಸಂಗ್ರಹಿಸಲು ಹೋಗಿದ್ದ ವೇಳೆ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ.

ಚೆಕ್ ಪೋಸ್ಟ್ ಬಳಿ ರೇವೂರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶರಣಗೌಡ ಪಾಟೀಲ್ ಎಂಬುವವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಸದ್ಯ ಹಲ್ಲೆಗೊಳಗಾದ ಸ್ವಾಮೀಜಿ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Exit mobile version