ಬೆಂಗಳೂರು: ಕೊನೆಗೂ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಪಾಸ್ ದರವನ್ನು ಇಳಿಕೆಗೆ ಮುಂದಾಗಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನರಿಗೆ ಇಂದು ಬಿಎಂಟಿಸಿ ಸಿಹಿ ಸುದ್ದಿ ನಿಡಿದೆ.

70ರೂ ಇದ್ದ ನಿತ್ಯದ ಪಾಸ್ ದರ 50ರೂಗೆ ಇಳಿಕೆ ಮಾಡಿದೆ. ಇದರ ಜೊತೆಗೆ ಹೊಸದಾಗಿ 5ರೂ, 10ರೂ, 15ರೂ ಹಾಗೂ 20ರೂ ಮತ್ತು 30ರೂಪಾಯಿಗೆ ಪಾಸ್ ನೀಡಲು ಬಿಎಂಟಿಸಿ ಮುಂದಾಗಿದೆ. ಈ ಮೂಲಕ ಟಿಕೆಟ್ ಬದಲಾಗಿ ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. 

ಈಗಾಗಲೇ ನಿತ್ಯ ಪಾಸಿನ ದರ 70 ರೂಪಾಯಿ ಪ್ರಯಾಣಿಕರಿಗೆ ಹೊರೆಯಾಗಿತ್ತು. ಇದರಿಂದ ಪ್ರಯಾಣಿಕರು ದರ ಇಳಿಕೆಗೆ ಸಾಕಷ್ಟು ಬಾರಿ ಒತ್ತಾಯಿಸಿದ್ದರು. ಕೊನೆಗೂ ಪ್ರಯಾನಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಈ ನಿರ್ಧಾರಕ್ಕೆ ಬಂದಿದೆ. ಇಲಾಖೆಯ ಈ ನಿರ್ಧಾರ ಕೇವಲ ಬೆಂಗಳೂರಿಗರಿಗಷ್ಟೆ ಅಲ್ಲ, ಅನ್ಯ ಕಾರ್ಯದ ಮೇಲೆ ನಿತ್ಯ ಬೆಂಗಳೂರಿಗೆ ಬರುವ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ.

ಇಟಿಎಂ ಯಂತ್ರದ ಮೂಲಕ ಪಾಸ್ ವಿತರಣೆ ಮಾಡಲಾಗುವುದು ಜೊತೆಗೆ ಪ್ರಯಾಣದ ದೂರ ಆಧರಿಸಿ ಪಾಸ್ ದರ ನಿಗದಿ ಮಾಡಲಾಗಿದೆ. ಒಟ್ಟು 5 ಮಾದರಿಯ ದರ ನಿಗದಿ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಪಾಸ್ ಖರೀದಿ ಮಾಡಲು ಆಗದವರು ಟಿಕೆಟ್ ಕೊಂಡು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಮಟಕಾ ದೊರೆ ರತನ್ ಲಾಲ್ ಖತ್ರಿಯ ಓಪನ್ ಟು ಕ್ಲೋಸ್ ಕಥೆ ಇದು…!

ರತನ್ ಲಾಲ್ ಖತ್ರಿ.. ಈ ಹೆಸರು ದೇಶದ ಮಟಕಾ ಪ್ರೇಮಿಗಳಿಗೆ ಖಂಡಿತಾ ಚಿರಪರಿಚಿತವಾಗಿರತ್ತೆ. ಬೇಕಿದ್ದರೆ ನೀವು ದೇಶದ ಗ್ರಾಮದ ಯಾವುದೇ ಅನಕ್ಷರಸ್ಥನಿಗೆ ಕೇಳಿ ನೋಡಿ, ರತನ್ ಲಾಲ್ ಖತ್ರಿ ಎಂದರೆ ಓ!

ನೊಂದವರ ನೆರವಿಗೆ ದಾಸೋಹ ಕಾರ್ಯವಾಗಬೇಕು: ತೋಂಟದ ಸಿದ್ಧರಾಮಶ್ರೀಗಳು

ನಮ್ಮ ಭಾರತ ದೇಶದ ಸಂಸ್ಕಾರ ಸಂಸ್ಕೃತಿಯೇ ವೈರಸ್ ಕಾಟ ಕಡಿಮೆಯಾಗಲು ಕಾರಣವಾಗಿದೆ. ಆದರೆ ಇಂದು ಕಲಿತವರಿಂದ ಕೆಲ ಆಚರಣೆ ಗಾಳಿಗೆ ತೂರಲಾಗಿದೆ. ಹೀಗಾಗಿ ವೈರಸ್ ಕಾಟದಿಂದ ಸಾಕಷ್ಟು ಜನರು ಸಂಕಷ್ಟು ಎದುರಿಸುವಂತಾಗಿದೆ.

ನಿರಾಣಿಗೆ ಹೈಕಮಾಂಡ್ ಬುಲಾವ್

ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಿ ಪಂಚಮಸಾಲಿ ಸಮಾವೇಶದ ಕುರಿತಾಗಿ ಮಾಹಿತಿ ನೀಡಲಿದ್ದಾರೆ.