ಕ್ವಾರಂಟೈನ್ ನಲ್ಲಿಯೇ ಯುವತಿಯ ಅತ್ಯಾಚಾರ..!

ಬಿಹಾರ: ಕ್ಯಾರೆಂಟೈನ್ ನಲ್ಲಿಯೇ ಇಬ್ಬರು ವಲಸೆ ಕಾರ್ಮಿಕರು ಸೇರಿದಂತೆ 6 ಪುರುಷರು 18 ವರ್ಷದ ಯುವತಿಯೋರ್ವಳನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಆರು ಮಂದಿ ಆರೋಪಿಗಳಾದ ವಿಜಯ್ ಯಾದವ್ (20), ಸುರೇಶ್ ಯಾದವ್ (22), ಮುಖೇಶ್ ಯಾದವ್ (21), ಚಂಚಲ್ ಯಾದವ್ (22), ಅಮಿತ್ ಪಾಸ್ವಾನ್ (18), ಮತ್ತು ಚುಲ್ಲಿ ಪಾಸ್ವಾನ್ (18) ಎಂದು ಗುರುತಿಸಲಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸಸಾರಂ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ದಾವತ್ ಪೊಲೀಸ್ ಠಾಣೆಯ ಪ್ರಾದೇಶಿಕ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜಕೀಯ ಒತ್ತಡದಿಂದಾಗಿ, ಪೊಲೀಸರು ಈ ವಿಷಯವನ್ನು ನಿಗ್ರಹಿಸಲು ಪ್ರಯತ್ನಿಸಿದರು. ಆದರೆ ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ಬದುಕುಳಿದ ಹುಡುಗಿಯ ಕುಟುಂಬ ಆರೋಪಿಸಿದ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Exit mobile version