ನವದೆಹಲಿ: ಇದು ಬೇಸಿಗೆ ಸಮಯ. ಕೊರೊನಾ ಕೂಡ ಈ ಸಮಯದಲ್ಲಿಯೇ ದೇಶವನ್ನು ಕಾಡುತ್ತಿದೆ. ಹೊರಗೆ ಬಿಸಿಲು, ಸೆಖೆ, ಉರಿ. ಆದರೆ ಬೇಸಿಗೆ ಸಮಯದಲ್ಲಿ ಖುಷಿಯ ವಿಚಾರ ಹಣ್ಣುಗಳ ರಾಜ ಮಾವಿನ ಹಣ್ಣು ಬೆಳೆಯ ಸಮಯ. ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.

ಮಾವಿನ ಹಣ್ಣು ಸಿಹಿಯಾಗಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ಕೊಬ್ಬು ಹೆಚ್ಚಾಗಬಹುದು, ರಕ್ತದೊತ್ತಡ ಜಾಸ್ತಿಯಾಗಬಹುದು. ತಾಜಾ ಮಾವಿನ ಹಣ್ಣು ತಿಂದರೆ ಯಾವುದೇ ತೊಂದರೆಯಿಲ್ಲ, ಇದರಿಂದ ಸಕ್ಕರೆ ಪ್ರಮಾಣ ಹೆಚ್ಚುವುದಾಗಲಿ, ಕೊಬ್ಬು ಬರುವುದಾಗಲಿ ಆಗುವುದಿಲ್ಲ.

ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ, ಎ, ಇ, ಕೆ ಮತ್ತು ವಿಟಮಿನ್ ಬಿ6 ಹೇರಳವಾಗಿರುತ್ತದೆ. ಅದರಲ್ಲಿ ಕ್ಯಾಲ್ಸಿಯಂ, ಕಬ್ಬಿಣದ ಅಂಶ, ಮೆಗ್ನೇಷಿಯಂ, ಪೊಟ್ಯಾಷಿಯಂ ಮತ್ತು ಕ್ವೆರ್ಸೆಟಿನ್, ಅಸ್ಟ್ರಾಗಾಲಿನ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಕೆಲವು ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ.

ಮಾವಿನಹಣ್ಣಿನಲ್ಲಿ ಹೆಚ್ಚಿನ ನಾರಿನಂಶವಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಬಿಡದ ನಾರಿನಂಶವಾಗಿದೆ. ಇವುಗಳ ಜೊತೆ ಬೀಜಗಳನ್ನು ಸೇರಿಸಿ ತಿಂದರೆ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ. ಇದರಿಂದ ಮಾವಿನಹಣ್ಣಿನಲ್ಲಿ ಮೆಗ್ನೇಷಿಯಂ ಮತ್ತು ಪೊಟ್ಯಾಷಿಯಂಗಳು ಹೇರಳವಾಗಿದ್ದು ಸೋಡಿಯಂ ಕಡಿಮೆಯಾಗಿರವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಮಾವಿನಹಣ್ಣಿನಲ್ಲಿ ವಿಟಮಿನ್ ಬಿ 6 ಯಥೇಚ್ಛವಾಗಿ ಇದೆ.ಇದು ಮೆದುಳಿನ ಆರೋಗ್ಯಕರ ಕಾರ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಆರೋಗ್ಯಕರ ಮೆದುಳಿನ ನರಗಳನ್ನು ಕಾಪಾಡಲು ವಿಟಮಿನ್ ಬಿ 6 ಮತ್ತು ಇತರ ಬಿ ಜೀವಸತ್ವಗಳು ಅತ್ಯಗತ್ಯ. ಮನಸ್ಥಿತಿಯನ್ನು ಸಮತೋಲನಗೊಳಿಸಲು ಮತ್ತು ಆರೋಗ್ಯಕರ ನಿದ್ರೆಗೆ ಸಹ ಸಹಕಾರಿ.

ಮಾವಿನಹಣ್ಣಿನಲ್ಲಿ ಪೆಕ್ಟಿನ್ ಕೂಡ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಕ್ಯಾನ್ಸರ್ ನಿಂದ ರಕ್ಷಿಸುವ ಗುಣವನ್ನು ಹೊಂದಿದೆ. ಮಾವಿನಹಣ್ಣಿನಲ್ಲಿರುವ ವಿಶೇಷ ವಸ್ತುವೆಂದರೆ ಮ್ಯಾಂಗಿಫೆರಿನ್, ಇದು ದೇಹದ ಮೇಲೆ ಆಂಟಿ-ವೈರಲ್ ಮತ್ತು ಉರಿಯೂತದ ಪರಿಣಾಮವನ್ನು ಬೀರುತ್ತದೆ. ಇದು ಯಕೃತ್ತಿನಿಂದ ಕೊಬ್ಬಿನಾಮ್ಲಗಳನ್ನು ತೆಗೆದುಹಾಕುತ್ತದೆ.

ಬಿ ಜೀವಸತ್ವಗಳು ಮತ್ತು ವಿವಿಧ ಪೋಷಕಾಂಶಗಳು ಮಳೆಯಾಗುವ ಮುನ್ನವೇ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಾವಿನ ಹಣ್ಣು ತಿನ್ನುವುದು ಒಳ್ಳೆಯದು.

Leave a Reply

Your email address will not be published.

You May Also Like

ಆಕ್ಸ್ ಫರ್ಡ್ ವಿವಿ ಕೋರೊನಾ ಲಸಿಕೆ : ಮೊದಲ ಹಂತದಲ್ಲಿ ಫಲಪ್ರದ

ಆಕ್ಸ್ ಫರ್ಡ್ ವಿವಿ ಅಭಿವೃದ್ಧಿಪಡಿಸುತ್ತಿರುವ ಕೋರೊನಾ ಲಸಿಕೆಯು ಆರಂಭಿಕ ಹಂತದಲ್ಲಿ ಭರವಸೆದಾಯಕ ಫಲಿತಾಂಶ ನೀಡಿದೆ.ಅಸ್ಟ್ರೋಜೈನೆಕಾ ಕಂಪನುಯ ಸಹಯೋಗದೊಮದಿಗೆ ಬ್ರಟನ್ನಿನ ಆಕ್ಸ್ ಫರ್ಡ್ ವಿವಿ

ILI ಲಕ್ಷಣ ವಿರುವವರು ಕೂಡಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ- ಸಚಿವ ಡಾ.ಕೆ.ಸುಧಾಕರ್

ನಗರದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಚಳಿಗಾಲದಲ್ಲಿ ಕೊರೊನಾ ಭಯ : ಹೋಮಿಯೋಪತಿಲ್ಲಿರುವ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ

ಹೊಮಿಯೊಪತಿಯಲ್ಲಿ ಕೊರೊನಾ ನಿಯಂತ್ರಣ ಹೇಗೆ? ಹೋಮಿಯೋಪತಿ ಅಂದರೆ ಏನು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಡಾ.ವೀರುಪಾಕ್ಷಪ್ಪ ಚಿಕ್ಕನರಗುಂದ (ಮೊ.9845376277) ಅವರೊಂದಿಗೆ ಡಾ.ಬಸವರಾಜ ಡಿ ತಳವಾರ (ಮೊ.9742058739) ಉತ್ತರಪ್ರಭಕ್ಕೆ ನಡೆಸಿದ ಸಂದರ್ಶನ ಇಲ್ಲಿದೆ ನೋಡಿ…