ಇನ್ನು ಕೆಲವೇ ದಿನಗಳಲ್ಲಿ ಹೊಸ ಮರಳು ನೀತಿ ಅನ್ವಯ ಕಾರ್ಯಾರಂಭ: ಸಿ.ಸಿ.ಪಾಟೀಲ್

c c Patil

ಕೋರೊನಾ ನಿವ೯ಹಣೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಕಾ೯ರ ಹಾಗೂ ಜಿಲ್ಲಾಡಳಿತ ಸಮಥ೯ವಾಗಿವೆ. ಯಾವುದೆ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಗದಗ:ಇನ್ನು ಕೆಲವೇ‌ ದಿನಗಳಲ್ಲಿ ನೂತನ ಮರಳು‌ ನೀತಿ‌ ಪ್ರಾರಂಭಿಸಲಿದ್ದೇವೆ. ಜೊತೆಗೆ ಎಂಎಂಐಎಲ್ ಹಾಗೂ ಹಟ್ಟಿ ಚಿನ್ನದ ಗಣಿ ಎಜಿನ್ಸಿಗಳಿಗೆ ನೂತನ ಮರಳು ನೀತಿ‌ ಅನ್ವಯ ಮರಳು ತೆಗೆಯಲು ಈ ಎರೆಡು ಎಜಿನ್ಸಿಗಳಿಗೆ ಆದೇಶ‌ ನೀಡಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಆಣೆಕಟ್ಟು ಹಿಂಬಾಗಗಳಲ್ಲಿ‌ ಸಂಗ್ರಹವಾದ ಶುದ್ಧವಾದ ಮರಳು ತೆಗೆಯಲು ನಿರ್ಧರಿಸಿದ್ದೇವೆ. ಮುಖ್ಯಮಂತ್ರಿಗಳ ಅನುಮತಿ ಪಡೆದು ಶಿವಮೊಗ್ಗ ಜಿಲ್ಲೆಯಿಂದ ಮರಳು ತೆಗೆಯಲು ಪ್ರಾರಂಭಿಸಲಿದ್ದೇವೆ. ಉದ್ದಿಮೆದಾರರು, ರೈತರಿಗೆ ಹಾಗೂ ಸಾಮಾನ್ಯರಿಗೆ 700 ರಿಂದ 750 ರೂ ಮೆಟ್ರಿಕ್ ಟನ್ ಮರಳು ಸಿಗುವ ವ್ಯವಸ್ಥೆ ಕಲ್ಪಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಗ್ರಾ‌ಮ ಪಂಚಾಯತಿ ಮಟ್ಟದಲ್ಲೂ ಈ ಯೋಜನೆಯನ್ನು ಶಿಘ್ರ ಪ್ರಾರಂಭಿಸಲಿದ್ದೇವೆ. ಈ ಮೂಲಕ ರಾಜ್ಯದಲ್ಲಿ ಐತಿಹಾಸಿಕ ಮರಳು ನೀತಿಯನ್ನು ಜಾರಿಗೆ ತಂದ ಕೀರ್ತಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.

Exit mobile version