ರಜೆ ರದ್ದುಗೊಳಿಸಿ ಜೂ.19ರವರೆಗೆ ಸುಪ್ರೀಂ ಕೋರ್ಟ್ ಕಾರ್ಯ

ನವದೆಹಲಿ: ದೇಶವ್ಯಾಪಿ ಲಾಕ್‌ ಡೌನ್ ಕಾರಣದಿಂದಾಗಿ ಶಿಷ್ಟಾಚಾರದ ಪ್ರಕಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರು ಪ್ರಕರಣ ಆಲಿಸಿ ತೀರ್ಪು ನೀಡುತ್ತಿದ್ದರು. ಹೀಗಾಗಿ ಲಾಕ್‌ ಡೌನ್‌ ತೆರವಾಗುವ ವರೆಗೆ ಇದೇ ಮಾದರಿಯಲ್ಲಿ ನ್ಯಾಯಾಲಯದ ಕಾರ್ಯ ಚಟುವಟಿಕೆಗಳನ್ನ ಮುಂದುವರೆಸಲು ಅಪೆಕ್ಸ್‌ ಕೋರ್ಟ್‌ ತೀರ್ಮಾನಿಸಿದೆ. ಜೂನ್‌ 19ರ ವರೆಗೆ ಹೀಗೆ ಮುಂದುವರೆಸಲು ಆದೇಶ ಹೊರಡಿಸಲಾಗಿದೆ.

ಸರ್ವೋಚ್ಛ ನ್ಯಾಯಾಲಯ ಕರೋನಾ ಮತ್ತು ಲಾಕ್‌ ಡೌನ್‌ ಕಾರಣದಿಂದಾಗಿ ನ್ಯಾಯಾಧೀಶರ ಬೇಸಿಗೆ ರಜೆ ರದ್ದು ಪಡಿಸಿತ್ತು. ಹೀಗಾಗಿ ಮೇ 18 ಅಂದರೆ ಸೋಮವಾರದಿಂದ ಬೇಸಿಗೆ ರಜೆ ತೆಗೆದುಕೊಳ್ಳಲು ಹೇಳಲಾಗಿತ್ತು. ಅದರೀಗ ಅದನ್ನೂ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಜೂನ್‌ 19ರ ವರೆಗೆ ಪ್ರಕರಣಗಳನ್ನ ಆಲಿಸಿ ತೀರ್ಪು ನೀಡಲಿದೆ. ಈಗಾಗಲೇ ಲಾಕ್‌ ಡೌನ್‌ ನಿಂದಾಗಿ ಹಲವು ಪ್ರಕರಣಗಳು ಕೋರ್ಟಿನ ಮೆಟ್ಟಿಲೇರಿದ್ದು, ತೀರ್ಪು ಹೊರ ಬೀಳಲು ಬಾಕಿ ಇದೆ. ಇನ್ನು ದೆಹಲಿ, ಗುಜರಾತ್‌, ಬಾಂಬೆ, ಮದ್ರಾಸ್‌ ಹೈ ಕೋರ್ಟ್‌ ತಮ್ಮ ಬೇಸಿಗೆ ರಜೆ ರದ್ದುಗೊಳಿಸಿರೋದಾಗಿ ಈ ಹಿಂದೆಯೇ ಹೇಳಿತ್ತು. ಇದೀಗ ಸುಪ್ರೀಂ ಕೋರ್ಟ್‌ ಕೂಡ ತಮ್ಮ ರಜೆಯನ್ನು ರದ್ದುಗೊಳಿಸಿ ಜೂನ್‌ 19ರ ವರೆಗೆ ಕಾರ್ಯನಿರ್ವಹಿಸಲಿದೆ.

Exit mobile version