ಎಷ್ಟು ಜನರಿಗೆ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ..?

ಆಂದ್ರಪ್ರದೇಶ: ಲಾಕ್ ಡೌನ್ ಹಿನ್ನೆಲೆ ಎಲ್ಲ ದೇವಸ್ಥಾನಗಳು ಬಂದ್ ಆಗಿದ್ದವು. ಇದರಿಂದ ಭಕ್ತರಿಗೆ ಒಂದು ಚಿಂತೆಯಾದರೆ, ದೇವಾಲಯಗಳನ್ನು ನಂಬಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿದ್ದವು. ಆದರೆ ಇದೀಗ ದೇವಸ್ಥಾನ ಆರಂಭಕ್ಕೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಹೀಗಾಗಿ ತಿರುಪತಿಯ ತಿಮ್ಮಪ್ಪನ ದರ್ಶನ ಆರಂಭವಾಗಿದೆ.
ಎರಡು ತಿಂಗಳ ನಂತರ ಭಕ್ತರಿಗೆ ತಿಮ್ಮಪ್ಪನ ದರ್ಶನ ಆರಂಭವಾಗಿದ್ದು ಕರೋನಾ ಭೀತಿ ಹಿನ್ನೆಲೆ ಮಾರ್ಚ್ 19 ರಂದು ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಭಕ್ತರ ದರ್ಶನವನ್ನು ಟಿಟಿಡಿ ಆಡಳಿತ ಮಂಡಳಿ ರದ್ದು ಮಾಡಿತ್ತು. ಸುಮಾರು ಎರಡು ತಿಂಗಳ ಕಾಲ ದೇವಾಲಯದಲ್ಲಿ ದೇವರ ಸೇವೆ, ಪೂಜೆ ಕಾರ್ಯಕ್ರಮಗಳನ್ನು ಏಕಾಂತದಲ್ಲಿ ನಡೆಸಲಾಗುತ್ತಿತ್ತು. ಇಂದಿನಿಂದ ಸ್ಥಳೀಯರಿಗೆ ಮಾತ್ರ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಹೊರರಾಜ್ಯಗಳು ಹಾಗೂ ಆಂಧ್ರದ ಹೊರ ಜಿಲ್ಲೆಗಳ ಜನರಿಗೆ ನಿಷೇಧ ಮಾಡಲಾಗಿದೆ. ಪ್ರತಿದಿನ 7 ಸಾವಿರ ಜನರಿಗೆ ಮಾತ್ರ ತಿಮ್ಮಪ್ಪನ ದರ್ಶನ ಭಾಗ್ಯ ಸಿಗಲಿದೆ.

Exit mobile version