ಹೆಚ್ಚು ಮದ್ಯ ಕುಡಿದಿದ್ದಾನೆ ಎಂಬ ಕಾರಣಕ್ಕೆ ಕೊಲೆ!

ಬೆಂಗಳೂರು: ತಮಗಿಂತ ಹೆಚ್ಚು ಮದ್ಯ ಸೇವನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಇಲ್ಲಿಯ ಆರ್.ಟಿ. ನಗರದಲ್ಲಿ ನಡೆದಿದೆ.

ಮೇ. 6ರಂದು ಮದ್ಯ ಖರೀದಿಸಿ ರಾಜೇಶ್, ಸುಜಿತ್ ಮತ್ತು ಕಿಶೋರ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಪಾರ್ಟಿ ಮಧ್ಯೆ ಹೆಚ್ಚು ಮದ್ಯ ತಮಗೆ ಬೇಕೆಂದು ಮೂವರು ಕಿತ್ತಾಡಿಕೊಂಡಿದ್ದಾರೆ.

ಮದ್ಯ ಖರೀದಿಗೆ ಕಿಶೋರ್ ಹೆಚ್ಚು ನೀಡಿಲ್ಲ ಎಂದು ರಾಜೇಶ್ ಮತ್ತು ಸುಜಿತ್ ಕಿಡಿಕಾರಿದ್ದಾರೆ. ಹೆಚ್ಚು ಹಣ ನೀಡದೇ ಅಧಿಕ ಮದ್ಯ ಕುಡಿದ ಎಂಬ ಕಾರಣಕ್ಕೆ ರಾಜೇಶ್ ಮತ್ತು ಸುಜಿತ್ ಸೇರಿಕೊಂಡು ಗೆಳೆಯ ಕಿಶೋರ್ ನನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Exit mobile version