ಬೀದರ್ ನಲ್ಲಿ ಮತ್ತೆ ಆತಂಕ!

ಬೀದರ್: ದೆಹಲಿಯಲ್ಲಿ ನಡೆದ ಜಮಾತ್‍ ಸಭೆಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯಿಂದ ಹಳೇ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕು ತಗುಲಿದೆ.

ಇಡೇನ್ ಕಾಲೋನಿಯ 50 ವರ್ಷದ ವ್ಯಕ್ತಿ ಹಾಗೂ 27 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು, ಈ ಇಬ್ಬರು ಕೊರೊನಾ ರೋಗಿ ನಂಬರ್ 644ರ ಸಂಪರ್ಕಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 14 ಜನರನ್ನು ಗುಣಮುಖವಾಗಿ ಮನೆಗೆ ತೆರಳಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿಗೆ ಒಂದು ಸಾವಾಗಿದೆ. ಸದ್ಯ ಕೊರೊನಾ ವಾರ್ಡ್ನಿಲ್ಲಿ 13 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯಾದ್ಯಂತ ಇಂದು 10 ಮಂದಿ ಹೊಸ ಪ್ರಕರಣಗಳು ದಾಖಲಾಗಿವೆ. ಬೀದರ್ ನಲ್ಲಿ 2, ಬಾಗಲಕೋಟೆಯಲ್ಲಿ 2, ದಾವಣಗೆರೆಯಲ್ಲಿ 3, ಹಾವೇರಿ, ವಿಜಯಪುರ ಹಾಗೂ ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858ಕ್ಕೆ ಏರಿದೆ.

Exit mobile version