ಕೇಂದ್ರ ಸರ್ಕಾರದ ನಡೆ ಸ್ವಾಗತಿಸಿದ ಪಿ.ಚಿದಂಬರಂ!

ನವದೆಹಲಿ: ಕೇಂದ್ರ ಸರ್ಕಾರ ತೆಗೆದುಕೊಂಡಿರು ನಿರ್ಧಾರವನ್ನು ಮಾಜಿ ವಿತ್ತ ಸಚಿವ ಚಿದಂಬರಂ ಬೆಂಬಲಿಸಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಪ್ರತಿ ನಡೆಯನ್ನು ಟೀಕಿಸುತ್ತಿದ್ದ ಚಿದಂಬರಂ ಮೊದಲ ಬಾರಿಗೆ ಬೆಂಬಲಿಸಿದ್ದಾರೆ. ಸಾಲದ ತೀರ್ಮಾನಕ್ಕೆ ಬೆಂಬಲ ಹಾಗೂ ಸಹಮತ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ರೂ. 4.2 ಲಕ್ಷ ಕೋಟಿ ಸಾಲ ಮಾಡಲು ಹೊರಟಿರುವ ಕ್ರಮವನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಚಿದಂಬರಂ ಬೆಂಬಲಿಸಿದ್ದಾರೆ.

ಆದರೆ ಈ ಹಣವನ್ನು ಬಡವರಿಗೆ ಪರಿಹಾರ ಒದಗಿಸಲು ಮತ್ತು ಆರ್ಥಿಕತೆಗೆ ಮತ್ತೆ ಚೈತನ್ಯ ನೀಡಲು ಮಾತ್ರ ಬಳಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ. ನಾವು ಮನವಿ ಮಾಡಿದ ಮೇಲೆ ಸರ್ಕಾರವು ಅಂತಿಮವಾಗಿ  4.2 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಾಲ ನೀಡಲು ನಿರ್ಧರಿಸಿದೆ. ಆದರೂ ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುವುದಾಗಿ ಚಿದಂಬರಂ ತಿಳಿಸಿದ್ದಾರೆ.

Exit mobile version