ಭಾರತದಲ್ಲಿ ಒಂದೇ ದಿನ ಸೋಂಕು ಕಾಣಿಸಿಕೊಂಡಿದ್ದು ಎಷ್ಟು ಜನರಿಗೆ ಗೊತ್ತಾ?

ನವದೆಹಲಿ: ಭಾರತದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ನಿರೀಕ್ಷೆ ಮೀರಿ ದಾಖಲಾಗುತ್ತಿದೆ. ಭಾನುವಾರ ಒಂದೇ ದಿನ ದೇಶದಲ್ಲಿ 4,296 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 111 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಅಮೇರಿಕ, ಸ್ಪೇನ್, ಯುಕೆ, ಇಟಲಿ, ರಷ್ಯಾ, ಫ್ರಾನ್ಸ್, ಜರ್ಮನಿ, ಬ್ರೆಜಿಲ್, ಟರ್ಕಿ, ಇರಾನ್ ದೇಶಗಳು ಒಂದು ಲಕ್ಷಕ್ಕೂ ಅಧಿಕ ಸೋಂಕಿತರನ್ನು ದಾಟಿದ ರಾಷ್ಟ್ರಗಳಾಗಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 67,161ಕ್ಕೆ ಏರಿಕೆಯಾಗಿದೆ. 20,969 ಜನ ಗುಣಮುಖರಾಗಿದ್ದು, ಒಟ್ಟಾರೆ ಇಲ್ಲಿಯವರೆಗೂ 2,212 ಜನ ಸಾವನ್ನಪ್ಪಿದ್ದಾರೆ. ಸೋಂಕಿತ ಪ್ರಕರಣದ ದೇಶಗಳ ಪಟ್ಟಿಯಲ್ಲಿ ಭಾರತ 14 ನೇ ಸ್ಥಾನದಲ್ಲಿದೆ.

ಇಲ್ಲಿಯವರೆಗೂ ಕೊರೊನಾ ಜಗತ್ತಿನಲ್ಲಿ 2.83 ಲಕ್ಷ ಜನರನ್ನು ಬಲಿ ಪಡೆದಿದೆ. ಸುಮಾರು 42 ಲಕ್ಷದಷ್ಟು ಜನರಿಗೆ ಸೋಂಕು ಹರಡಿದೆ. ಅಮೆರಿಕದಲ್ಲಿ 13.67 ಲಕ್ಷ ಜನರಿಗೆ ಸೋಂಕು ತಗುಲಿದೆ. 87 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸ್ಪೇನ್ ನಲ್ಲಿ 2.64 ಲಕ್ಷ ಜನರಲ್ಲಿ ಕೊರೊನಾ ಕಂಡು ಬಂದಿದೆ. 26,600ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಯುಕೆನಲ್ಲಿ 2.19 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 31,800ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 2.19 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 30,500 ಜನ ಸಾವನ್ನಪ್ಪಿದ್ದಾರೆ.

Exit mobile version