ದಕ್ಷಿಣ ಆಫ್ರಿಕಾ ಕ್ರಿಕೇಟ್ ಆಟಗಾರನಿಗೆ ಕೊರೋನಾ ಪಾಸಿಟಿವ್..!

ಜೋಹಾನ್ಸ್ ಬರ್ಗ್ : ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಕ್ರಿಕೆಟಿಗ ಸೋಲೋ ಎನ್ಕ್ವಿನಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಆಟಗಾರ ಗಿಲ್ಲನ್ ಬಾರ್ರೆ ಸಿಂಡ್ರೋಮ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ. ಅಲ್ಲದೇ, ಅದರೊಂದಿಗೆ ಕೊರೊನಾ ಮೆತ್ತಿಕೊಂಡಿದ್ದು, ಸೋಲೋ ಎನ್ಕ್ವಿ ನಿ ಸೋಲೋ ಅವರ ಸ್ಥಿತಿ ಸದ್ಯ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೊರೊನಾ ಪಾಸಿಟಿವ್ ಬಂದ ಮೂರನೇ ಕ್ರಿಕೆಟ್ ಆಟಗಾರ ಸೋಲೋ ಆಗಿದ್ದಾರೆ. ಇದಕ್ಕೂ ಮೊದಲು ಪಾಕ್ ಆಟಗಾರ ಜಾಫರ್ ಸರ್ಫರಾಜ್, ಸ್ಕಾಟ್‌ಲೆಂಡ್ ನ ಮಜಿದ್ ಹಕ್ ಅವರಿಗೆ ಈಗಾಗಲೇ ಕೊರೊನಾ ಕಂಡು ಬಂದಿದೆ.

ಕಳೆದ ವರ್ಷ ನನಗೆ ಜಿಬಿಎಸ್ ಸಮಸ್ಯೆ ಕಾಣಿಸಿಕೊಂಡಿತ್ತು. ಕಳೆದ 10 ತಿಂಗಳಿಂದ ಈ ರೋಗದೊಂದಿಗೆ ಹೋರಾಟ ಮಾಡುತ್ತಿದ್ದೇನೆ. ಈಗಾಗಲೇ ಜಿಬಿಎಸ್ನಿಂದ ಅರ್ಧದಷ್ಟು ಚೇತರಿಕೆ ಹೊಂದಿದ್ದು, ಟಿಬಿ, ಮೂತ್ರಪಿಂಡ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಈಗ ಕೊರೊನಾ ಪಾಸಿಟಿವ್ ಇರುವುದು ವರದಿಯಲ್ಲಿ ಖಚಿತವಾಗಿದೆ. ನನಗೆ ಈ ರೀತಿ ಏಕೆ ಆಗುತ್ತಿದೆ ಅರ್ಥವಾಗುತ್ತಿಲ್ಲ ಎಂದು ಸೋಲೋ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Exit mobile version