ದುಡ್ಡಿದ್ದವರು ಮಾತ್ರ ಕುಡಿತಾರೆ ಅಂದ್ರು ಅಬಕಾರಿ ಸಚಿವರು

ಕೋಲಾರ: ಯಾರ ಬಳಿ ದುಡ್ಡು ಇದಿಯೋ ಅವರು ಮಾತ್ರ ಕುಡಿತಾರೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ. ಮದ್ಯದ ಮೇಲಿನ ಸುಂಕ ಹೆಚ್ಚಳ ಕುರಿತು ಕೋಲಾರದಲ್ಲಿ ಅಬಕಾರಿ ಸಚಿವ ಎಚ್ ನಾಗೇಶ್ ಪ್ರತಿಕ್ರಿಯೆಸಿ ದೆಹಲಿ ಹಾಗೂ ಆಂಧ್ರ ಮಾದರಿಯಲ್ಲಿ ನಮ್ಮಲೂ ಟ್ಯಾಕ್ಸ್ ಹೆಚ್ಚಳಮಾಡಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಶೇ.40 ರಷ್ಟು ಮದ್ಯದಂಗಡಿ ಮಾತ್ರ ತೆರೆದಿದ್ದು, ಮೂರು ದಿನಗಳಲ್ಲಿ 500 ಕೋಟಿ ವರೆಗೂ ಕಲೆಕ್ಷನ್ ಆಗಿದೆ. ಆದರೆ ಇಂದಿನಿಂದ ಮದ್ಯ ಮಾರಾಟಕ್ಕೆ ಶೇ.11 ರಷ್ಟು ಟ್ಯಾಕ್ಸ್ ಹೆಚ್ಚಿಸಲಾಗಿದೆ ಎಂದರು.

ಇದರಿಂದಾಗಿ ಒಂದು ಕ್ವಾಟರ್ ಗೆ 5 ರೂಪಾಯಿ ಹೆಚ್ಚಳವಾಗಲಿದೆ. ಒಟ್ಟು 22,500 ಸಾವಿರ ಕೋಟಿ ಗುರಿ ಇಲಾಖೆಗಿತ್ತು. ಆದರೆ ಟ್ಯಾಕ್ಸ್ ಹೆಚ್ಚಳದಿಂದಾಗಿ 25,000 ಕೋಟಿ ಬೊಕ್ಕಸಕ್ಕೆ ಬರಲಿದೆ. ಕೆಲ ನಿಯಮಗಳನ್ನು ವಿಧಿಸಿ ಕೆಲವು ಅಂಗಡಿಗಳಿಗೆ ಮಾತ್ರ ಸಾರಾಯಿ ಮಾರಾಟಕ್ಕೀಗ ಅನುಮತಿ ನೀಡಲಾಗಿದ್ದು, ಉಳಿದ ಅಂಗಡಿ ತೆರೆಯುವ ಕುರಿತು 18ನೇ ತಾರಿಖಿನ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಒಂದೆಡೆ ಸಾರಾಯಿ ಮಾರಾಟಕ್ಕೆ ತೀವ್ರ ವಿರೋಧವಿದೆ. ಇನ್ನು ಮತ್ತೊಂದೆಡೆ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಇಂಥಹ ಪರಿಸ್ಥಿತಿಯಲ್ಲಿ ಟ್ಯಾಕ್ಸ್ ಹೆಚ್ಚಳ ಮಾಡಿದ್ದು ಎಷ್ಟು ಸರಿ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ನಾಗೇಶ್ ನಮ್ಮವು ಖರ್ಚು ವೆಚ್ಚ ಇರುತ್ತದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದೆ. ಈ ಮಾದರಿಯನ್ನು ಅನುಸರಿಸಿಯೇ ನಮ್ಮ ರಾಜ್ಯದಲ್ಲೂ ಟ್ಯಾಕ್ಸ್ ಹೆಚ್ಚಿಸಲಾಗಿದೆ ಎಂದರು.

Exit mobile version