ಗದಗ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದವರ ನೆರವಿಗೆ 1600 ಕೋಟಿ ರೂಗಳ ವಿಶೇಷ ಪ್ಯಾಕೇಜ್ ನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದು ಅಭಿನಂದನಾರ್ಹ. ಆದರೆ ಈ ಪ್ಯಾಕೇಜಿನಲ್ಲಿ ಗೋಂಧಳಿ ಸಮಾಜಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘದ ರಾಜ್ಯಾಧ್ಯಕ್ಷ ವಿಠಲ್ ಗಣಾಚಾರಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಅಲೆಮಾರಿ ಸಮಾಜಗಳಿಗೆ ಹೆಚ್ಚಿನ ನೆರವು ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಿರುವ ಗೋಂಧೋಳಿ ಸಮಾಜದ ರಾಜ್ಯಾಧ್ಯಕ್ಷ ವಿಠಲ್ ಗಣಾಚಾರಿ ಮುಖ್ಯಮಂತ್ರಿಗಳ ಈ ವಿಶೇಷ ಪ್ಯಾಕೇಜ್ ನಿಂದ ಶ್ರಮಿಕ ಸಮುದಾಯಗಳಿಗೆ ಉಸಿರು ಬಂದಂತಾಗಿದೆ.
ಈ ನಾಡಿನ ಅಲೆಮಾರಿ ಜೀವನ ನೆಡೆಸುತ್ತಿದ್ಧ ಲಕ್ಷಾಂತರ ಕುಟುಂಬಗಳು ಹೊಟ್ಟೆಗೆ ಹಿಟ್ಟು ಇಲ್ಲದೇ ಬದುಕುತ್ತಿದ್ದಾರೆ ಊರೂರು ಸುತ್ತುತ್ತಾ, ಅಲೆಮಾರಿಗಳಾಗಿ ಜೀವನ ನೆಡೆಸುತ್ತಿದ್ಧಾರೆ. ಇದರಲ್ಲಿ ಗೋಂಧಳಿ ಸಮಾಜದವರು ಹಾಡುತ್ತಾ, ಬುಡಬುಡಕಿ ಬಾರಿಸುತ್ತಾ ಭಿಕ್ಷಾಟನೆ ಮಾಡುತ್ತಾ ಊರೂರೂ ಸುತ್ತಿ ಕೌದಿ ಹೊಲೆಯುತ್ತಾ, ಜೋತೆಗೆ ಪಾತ್ರೆ (ಬಾಂಡೆ) ವ್ಯಾಪಾರ, ಕಬ್ಬಿಣ, ತಗಡು, ಹಳೇ ಸಾಮಾನು ಮೋಡಕಾ ತೆಗೆದುಕೊಂಡು ತಮ್ಮ ತುತ್ತಿನ ಚೀಲವನ್ನು ಸ್ವಾಬಿಮಾನದಿಂದ ತುಂಬಿಸಿಕೋಳ್ಳುತ್ತಿದ್ದರು. ತಳ್ಳೋಗಾಡಿ, ಅಟೋ, ಬೈಕ್, ಸೈಕಲ್ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಹೋಗಿ ವ್ಯಾಪಾರ ಮಾಡಿಕೊಂಡು ಬಂದು ತಮ್ಮ ಜೀವನ ಸಾಗಿಸುತ್ತಿದ್ದರು. ಆದರೇ ಮಹಾಮಾರಿ ಕರೋನಾ ವೈರಸ್ ನಿಂದ ಜನರು ಅವರಿಗೆ ಹಳ್ಳಿಗಳಿಗೆ ಹೋಗಲು ಸೇರುಸುತ್ತ ಇಲ್ಲಾ. ರಾಜ್ಯಾದ್ಯಂತ ಲಕ್ಷಾಂತರ ಜನರು ಈ ಕಾಯಕವನ್ನೆ ನಂಬಿ ಬದುಕುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಊರೂರು ಅಲಿಯದಿದ್ದರೇ ತುತ್ತಿನ ಚೀಲ ತುಂಬಲ್ಲ
ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡಿದರೆ ಅವರ ಬದುಕು ನಡೆಯುತ್ತದೆ. ಇಲ್ಲದಿದ್ದರೆ ಬದುಕು ಬಂಡಿ ಸಾಗಿಸುವುದು ಕಷ್ಟದ ಕೆಲಸವಾಗಿದೆ. ಈಗಲೂ ಅಷ್ಟೇ ಲಾಕ್ ಡೌನ್ ಶುರುವಾದ ನಂತರ ಕಷ್ಟಕ್ಕೆ ಗುರಿಯಾದ ಸಮಾಜದ ಲಕ್ಷಾಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಸರ್ಕಾರದಿಂದ ಆರ್ಥಿಕ ನೆರವು ಬಯಸುತ್ತಿದ್ದಾರೆ. ನಮ್ಮ ಸಮಾಜದ ಜನ ಎದುರಿಸುತ್ತಿರುವ ಕಷ್ಟವನ್ನು ನಿಮ್ಮ ಅವಗಾಹನೆಗೆ ತರಲು ಬಯಸುತ್ತಿದ್ದೇನೆ. ಇಂತಹ ಸಂಕಷ್ಟ ಕಾಲದಲ್ಲಿ ಅಲೆಮಾರಿ ಬಾಂಡೆ ವ್ಯಾಪಾರಿಗಳಿಗೆ ಮಾಸಿಕ ತಲಾ ಐದು ಸಾವಿರ ರೂ ನೆರವು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕನಿಷ್ಟ ಆರು ತಿಂಗಳ ಮಟ್ಟಿಗಾದರೂ ಸಮಾಜದ ದುಡಿಯುವ ಶ್ರಮಿಕ ವರ್ಗಕ್ಕೆ ನೆರವು ದೊರೆತರೆ ಅವರು ಚೇತರಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೇ ಈಗಾಗಲೇ ತೀವ್ರ ಸಂಕಷ್ಟಕ್ಕೀಡಾದ ನಮ್ಮ ಸಮಾಜದ ಜನರು ಮತ್ತಷ್ಟು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ತಕ್ಷಣವೇ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
