ಪೊಲೀಸ್ ಠಾಣೆಯೇ ದೇವಸ್ಥಾನವಿದ್ದಂತೆ : ಪೂಜೆ ಸಲ್ಲಿಸಿ ಗೌರವ

ಹುಬ್ಬಳ್ಳಿ: ಲಾಕ್ ಡೌನ್ ವೇಳೆ ಪೊಲೀಸರ ಸೇವೆ ಅಷ್ಟಿಷ್ಟಲ್ಲ, ಜನರ ಆರೋಗ್ಯದ ದೃಷ್ಟಿಯಿಂದ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪೊಲೀಸರು ಪಟ್ಟ ಶ್ರಮಕ್ಕೆ ಬೆಲೆ ಕಟ್ಟೋಕೆ ಆಗಲ್ಲ. ಆ ಕಾರಣದಿಂದ ಪೊಲೀಸರೆ ದೇವರು, ಪೊಲೀಸ್ ಠಾಣೆಯೇ ದೇವಸ್ಥಾನ ಎನ್ನುವ ಕಲ್ಪನೆಯೊಂದಿದೆ ಪೊಲೀಸ್ ಠಾಣೆಗೆ ಪೂಜೆ ಸಲ್ಲಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಬಮ್ಮಾಪುರ ಓಣಿಯ ಜನರು ಸೇರಿಕೊಂಡು ಘಂಟಿಕೇರಿ ಪೋಲಿಸ್ ಠಾಣೆಗೆ ಪೂಜೆ ಸಲ್ಲಿಸಿ ಈ ಮೂಲಕ ಕೊರೋನಾ ವಾರಿಯರ್ದಸ್ರು ಗೆ ಗೌರವ ಸಲ್ಲಿಸಿದರು.

          ಪೋಲಿಸ್ ಠಾಣೆಗೆ ತೆರಳಿ ದೀಪ ಬೆಳಗಿ, ಟೆಂಗಿನಕಾಯಿ ಒಡೆದು ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಪೂಜೆ ಸಲ್ಲಿಸಲಾಯಿತು.

      ಕೊರೊನಾ ವೈರಸ್ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಸುವುದರ ಜೊತೆಗೆ ಮನೆಯಿಂದ ಯಾರು ಹೊರಬರದಂತೆ ಪೋಲಿಸ್ ಸಿಬ್ಬಂದಿ ಅವಿರಿತ ಶ್ರಮ ವಹಿಸಿದ್ದಾರೆ. ಹೀಗಾಗಿ ಪೋಲಿಸ್ ಠಾಣೆಯೂ ಕೂಡ ನಮಗೆ ದೇವಸ್ಥಾನ ವಿದ್ದಂತೆ. ಈ ಕಾರಣದಿಂದ ನಾವು ಇವತ್ತು ಪೋಲಿಸ್ ಠಾಣೆಗೆ ಬಂದು ವಿಶೇಷ ಪೂಜೆ ಸಲ್ಲಿಸಿರುವುದಾಗಿ ಸ್ಥಳೀಯ ನಿವಾಸಿ ಮಂಜುನಾಥ ಯಂಟ್ರುವಿ ತಿಳಿಸಿದರು.

Exit mobile version