ಕೋವಿಡ್ ತಪಾಸಣೆ: ಹುಬ್ಬಳ್ಳಿಯ ಮಾಧ್ಯಮ ಪ್ರತಿನಿಧಿಗಳ ವರದಿ ನೆಗೆಟಿವ್.

ಹುಬ್ಬಳ್ಳಿ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ದಿ.27 ಹಾಗೂ 28 ರಂದು ನಗರದ  ಕಿಮ್ಸ್ ನ ಪಿ.ಎಮ್.ಎಸ್.ಎಸ್.ವೈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎರಡು  ದಿನಗಳ ಕಾಲ ಆಯೋಜಿಸಲಾಗಿದ್ದ ಕೋವಿಡ್-19 ಆರೋಗ್ಯ ತಪಾಸಣೆಯಲ್ಲಿ ಒಟ್ಟು 158 ಮಾಧ್ಯಮ ಪ್ರತಿನಿಧಿಗಳ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಣೆ ಮಾಡಿ, ಮಾದರಿಗಳನ್ನು ಸಾರ್ಸ್ ಕೋವಿಡ್ ವೈರಾಣು (ಕೊರೋನಾ) ಪತ್ತೆಗೆ ಸಲ್ಲಿಕೆ ಮಾಡಲಾಗಿತ್ತು. ಇದೀಗ ಪರೀಕ್ಷೆಗೆ ಒಳಪಟ್ಟ ಎಲ್ಲ ಮಾದ್ಯಮ ಪ್ರತಿನಿಧಿಗಳ ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿದ್ದು, ಮಾಧ್ಯಮ ಮಿತ್ರರು ಹಾಗೂ ಅವರ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Exit mobile version