ಕಾರ್ಮಿಕರನ್ನು ಗಮ್ಯ ಸ್ಥಾನಕ್ಕೆ ತಲುಪಿಸುತ್ತಿರುವ ರೈಲ್ವೆ ಇಲಾಖೆ!

ಹೈದರಾಬಾದ್ : ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿದ್ದ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯಾತ್ರಾರ್ಥಿಗಳನ್ನು ಸಾಗಿಸುವ ಕಾರ್ಯ ನಡೆದಿದೆ. ವಿಶೇಷ ರೈಲಿನಲ್ಲಿ ಸುಮಾರು 1200 ವಲಸಿಗರನ್ನು ಹೊತ್ತ ರೈಲು ತನ್ನ ಪ್ರಯಾಣ ಪ್ರಾರಂಭಿಸಿದೆ.

ಲಾಕ್ ಡೌನ್ ನಲ್ಲಿ ಸಿಲುಕಿದ್ದವರ ಸಂಚಾರಕ್ಕೆ ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ತೆಲಂಗಾಣದಿಂದ ಜಾರ್ಖಂಡ್ಗೆ ವಲಸಿಗರನ್ನು ಹೊತ್ತು ರೈಲು ಶುಕ್ರವಾರ ಪ್ರಯಾಣ ಬೆಳೆಸಿದೆ.

ಲಿಂಗಂಪಲ್ಲಿಯಿಂದ ಜಾರ್ಖಂಡ್ನ ಹತಿಯಾಗೆ ರೈಲು ಹೊರಟಿದೆ. ಬೆಳಗ್ಗೆ 4:50ಕ್ಕೆ ರೈಲು ಪ್ರಯಾಣ ಆರಂಭಿಸಿದೆ. ಈ ರೈಲು 24 ಬೋಗಿಗಳನ್ನು ಹೊಂದಿದ್ದು, ಇದೂವರೆಗೆ ವಲಸಿಗರನ್ನು ಕರೆದೊಯ್ಯಲು ನಿಯೋಜಿಸಿದ ಏಕೈಕ ರೈಲು ಇದಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ ಮಹಾನಿರ್ದೇಶಕರು ತಿಳಿಸಿದ್ದಾರೆ.

Exit mobile version