ಕತ್ತಲ ಕೋಣೆ ಕನ್ನಡ ಸಿನಿಮಾಕ್ಕೆ ಭೋಜಪುರಿ ನಿರ್ಮಾಪಕನ ಕಣ್ಣು!

ಬೆಂಗಳೂರು: ಕತ್ತಲ ಕೋಣೆ ಕನ್ನಡ ಸಿನಿಮಾ ಮೇಲೆ ಇದೀಗ ಭೋಜಪುರಿ ನಿರ್ಮಾಪಕರು ಕಣ್ಣು ಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಇದಾಗಿದ್ದು 1998ರ ಸತ್ಯ ಘಟನೆಯನ್ನು ಒಳಗೊಂಡ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ನಡೆದ ಒಂದು ರಿಯಲ್ ಸ್ಟೋರಿ ಇದಾಗಿದೆ.

ಇದೀಗ ಈ ಸಿನಿಮಾ ಮರಾಠಿಯಲ್ಲಿ ಮಾಡಲು ಮರಾಠಿ ನಿರ್ಮಾಪಕರೊಬ್ಬರು ಸಿದ್ಧತೆ ನಡೆಸಿಕೊಂಡಿದ್ದಾರಂತೆ. ಹೀಗಾಗಿ ಈ ಸಿನಿಮಾವನ್ನು ಭೋಜಪುರಿ ನಿರ್ಮಾಪಕರೊಬ್ಬರು ಮರಾಠಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರಂತೆ. ಸಿನಿಮಾ ನಿರ್ಮಾಪಕ ಪಿಆರ್ ಅಮೀನ್ ಗ್ರೀನ್ ಸಿಗ್ನಲ್ ನೀಡುವುದೊಂದೇ ಬಾಕಿ ಇದೆ. ಭೋಜಪುರಿ ನಿರ್ಮಾಪಕ ಹಾಗೂ ನಿರ್ಮಾಪಕರ ನಡುವಿನ ಮಾತುಕತೆ ಇನ್ನಷ್ಟೇ ಬಾಕಿ ಇದೆ. ಅಂದುಕೊಂಡಂತಾದರೆ ಕತ್ತಲೆ ಕೋಣೆ ಸಸ್ಪೆನ್ಸ್ ಥ್ರಿಲ್ಲರ್ಹಾ, ಹಾರರ್ ಸಿನಿಮಾ ಇದೀಗ ಬೋಜಪುರಿ ಚಿತ್ರರಂಗದಲ್ಲಿ ಸದ್ದು ಮಾಡಲು ರೆಡಿಯಾಗುತ್ತಿದೆ.

ಈ ಕಥೆಯ ಎಳೆಯನ್ನು ಹಿಡಿದುಕೊಂಡು ಚಿತ್ರದ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ಒಂದು ಭಿನ್ನವಾದ ಸಿನಿಮಾ ಮಾಡಿದ್ದಾರೆ. ಇದಕ್ಕೆ ಪಿಆರ್ ಅಮಿನ್ ಬಂಡವಾಳ ಹಾಕಿದ್ದು, ಸಹ ನಿರ್ಮಾಪಕರಾಗಿ ಶ್ರೀನಿವಾಸ ಶಿವಮೊಗ್ಗ ಸಾಥ್ ನೀಡಿದ್ದಾರೆ.

ಒಟ್ಟಾರೆ ಒಂದು ನೈಜ ಕಥೆಯನ್ನು ಭಿನ್ನ ವಿಭಿನ್ನವಾದ ಸ್ಕ್ರೀನ್ ಪ್ಲೇ ಮೂಲಕ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ಸಿನಿಮಾ ನಿರೂಪಣೆ ಮಾಡಿದ್ದಾರೆ. ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ಸಂದೇಶ್ ಶೆಟ್ಟಿಯ ಚೊಚ್ಚಲ ಸಿನಿಮಾ ಇದಾಗಿದೆ.

ಚಿತ್ರದ ಚಿತ್ರಕರಣ ಶೇ.85 ರಷ್ಟು ಭಾಗ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಸಿನಿಮಾ ಮೋಸ್ಟ್ ವಾಂಟೆಡ್ ಕಾಡುಗಳಲ್ಲಿ ಚಿತ್ರತಂಡ ಈ ಸಿನಿಮಾ ಚಿತ್ರೀಕರಿಸಿದೆ. 2018 ರಂದು ಕರ್ನಾಟಕದಾದ್ಯಂತ 70 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೊಂಡಿದ್ದು ಚಿತ್ರ ಯಶಸ್ವಿ ಅತ್ತ ದಾಪುಗಾಲು ಹಾಕಿತ್ತು. ಆದರೆ ಆ ಸಂದರ್ಭದಲ್ಲಿ ಭಾರಿ ಮಳೆಯಿಂದ ಸಿನಿಮಾ ಅಷ್ಟು ಹಣ ಸಂಪಾದನೆ ‌ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಉತ್ತಮವಾದ ಹಾರರ್ ಸಿನಿಮಾ ಎಂದು ಪ್ರೆಕ್ಷರಲ್ಲಿ ಮೆಚ್ಚುಗೆ ಪಡೆದಿತ್ತು.

ಈ ಸಿನಿಮಾದ ನಿರ್ದೇಶನದಲ್ಲಿ ಸಂದೇಶ ಶೆಟ್ಟಿ ಸೈ ಎನಿಸಿಕೊಂಡಿದ್ದು ತನ್ನ ಸಿನಿಮಾದಲ್ಲಿ ನಾಯಕನ ಪಾತ್ರಗಳನ್ನು ಭಿನ್ನವಾಗಿ ನಿರೂಪಿಸಲು ಹೋಗಿ ಕೆಲವೊಂದು ಕಡೆ ಎಡವಟ್ಟು ಮಾಡಿಕೊಂಡಿದ್ದಾರೆ. ಪತ್ರಕರ್ತನೊಬ್ಬನ ನೈಜ ಘಟನೆಯನ್ನು ಬಿತ್ತರಿಸಲು ಹೋಗುತ್ತಿರುವ ಒಂದು ಕಥೆಯಾದರೆ ಒಬ್ಬ ಬಾಲಕನ ಮುಗ್ಧ ಮನಸ್ಸಿನ ಮೇಲೆ ಬೀಳುವ ಪರಿಣಾಮ ಆತನ ಮಾನಸಿಕ ಖಿನ್ನತೆಗೆ ಒಳಗಾಗಿ ನರಳಾಡುವ ದೃಶ್ಯದ ಸನ್ನಿವೇಶ ಇನ್ನೊಂದು ಕಡೆ ಇದು ಕತ್ತಲಕೋಣೆಯ ಸಿನಿಮಾದ ಹೈಲೇಟ್ಸ್ ಆಗಿದೆ.

ಏನೇ ಆಗಲಿ ಸಿನಿ ಜಗತ್ತಿನಲ್ಲಿ ಏನಾದ್ರು ಸಾಧಿಸಬೇಕು ಎಂದು ಕಟ್ಟ ತೊಟ್ಟ ಕ್ರೀಯಾಶೀಲ ನಿರ್ದೇಶಕ ಸಂದೇಶ್. ಈಗಾಗಲೇ ಮೊದಲ ಪ್ರಯತ್ನದಲ್ಲಿ ಸಂದೇಶ ಶೆಟ್ಟಿಗೆ ಪ್ರೇಕ್ಷಕ ಸೈ ಅಂದ್ರು ಗಲ್ಲಾಪೆಟ್ಟಿಗೆಗೆ ಮಾತ್ರ ಭಾರಿ ಪೆಟ್ಟು ಬಿದ್ದಿತ್ತು. ಈಗಲಾದ್ರು ಕನ್ನಡದ ಕತ್ತಲಕೋಣೆ ಮರಾಠಿಯಲ್ಲಿ ಸದ್ದು ಮಾಡುವಂತಾಗಲಿ ಎಂದು ಹಾರೈಸೋಣ.

Exit mobile version