ಉಡುಪಿ: ಪೊಲೀಸರೊಂದಿಗೆ ಸೈನಿಕರು ಜಟಾಪಟಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಇಲ್ಲಿನ ಏನ್.ಸಿ.ಸಿ ಮೈದಾನದಲ್ಲಿ ಸೈನಿಕರ ಜೊತೆ ಪೊಲೀಸರು ಜಟಾಪಟಿ ನಡೆಸಿದ್ದಾರೆ.
ಮೈದಾನದಲ್ಲಿ ಗುಂಪುಗೂಡಿ ಆಟ ಆಡುತ್ತಿರುವುದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ಸೈನಿಕರು ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಸೈನಿಕರು ನಮ್ಮನ್ನು ಪ್ರಶ್ನಿಸುವ ಹಕ್ಕು ನಿಮಗಾರಿಗೂ ಇಲ್ಲ ಎಂದು ವಾದಿಸಿದ್ದಾರೆನ್ನಲಾಗಿದ್ದು, ಪೊಲೀಸರೆದುರು ಸೈನಿಕರು ತೋರಿದ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಪ್ರಕರಣ ಕೆಲ ದಿನಗಳ ಹಿಂದೆಯೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
