ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿಷೇಧ

ಗದಗ: ಜಗಿಯುವ ತಂಬಾಕು ಉತ್ಪನ್ನ ಮತ್ತು ಪಾನ್ ಮಸಾಲ, ಇತ್ಯಾದಿಗಳನ್ನು ಸೇವನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಕೊವಿಡ್-19 ವೈರಾಣು ಹರಡುವಿಕೆ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ಜಗಿಯುವ ತಂಬಾಕು ಉತ್ಪನ್ನಗಳು, ಪಾನ ಮಸಾಲ, ಜರ್ದಾ, ಖೈನಿ, ಸುಪಾರಿ, ಎಲೆ-ಅಡಿಕೆ, ಕಡ್ಡಿಪುಡಿ, ಚುಯಿಂಗಮ್ ಇತ್ಯಾದಿ ಉತ್ಪನ್ನಗಳ ಸೇವನೆ, ಉಗುಳುವುದು ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡುವದನ್ನು ನಿಷೇಧಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿರುತ್ತಾರೆ. ಆದೇಶ ಉಲ್ಲಂಘನೆಯಾದಲ್ಲಿ ಸಾಂಕ್ರಾಮಿಕ ರೋಗಗಳ ಕಾಯಿದೆ 1897, ವಿಪತ್ತು ನಿರ್ವಹಣಾ ಕಾಯಿದೆ 2005, ಭಾರತೀಯ ದಂಡ ಸಂಹಿತೆಯ ಕಲಂ 188, 268 ಮತ್ತು 270ರ ಅಡಿಯಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.

Exit mobile version