ಗದಗ: ಆಧುನಿಕ ದಿನಮಾನದಲ್ಲಿ ಡಿಜಿಟಲ್ ಮಾದ್ಯಮದ ಶಕೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ಸುದ್ದಿಗಳನ್ನು ತಲುಪಿಸುವಂತಹ ಕಾರ್ಯ ನ್ಯೂಸ್ ಪೋರ್ಟಲ್ ಗಳು ಮಾಡುತ್ತಿವೆ ಎಂದು ಆಯುರ್ವೇದ ವೈದ್ಯ ಡಾ.ಕೆ.ಯೋಗೇಶನ್ ಅಭಿಪ್ರಾಯಪಟ್ಟರು.
ಉತ್ತರ ಪ್ರಭ ದಿನ ಪತ್ರಿಕೆ ಕಾರ್ಯಾಲಯದಲ್ಲಿ ನಡೆದ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಈ ಹಿಂದೆ ಮಾದ್ಯಮ ಕ್ಷೇತ್ರದಲ್ಲಿನ ಕಾರ್ಯ ಬಹಳಷ್ಟು ಕಷ್ಟದಾಯಕವಾಗಿತ್ತು. ಆದರೆ ಇಂದಿನ ಆಧುನಿಕ ಮಾದ್ಯಮದ ಪ್ರಗತಿಯಿಂದ ಸಾಕಷ್ಟು ಸರಳೀಕರಣವಾಗಿದೆ. ಆದರೆ ಎಷ್ಟು ಸರಳಿಕರಣವಾಗಿದೆಯೋ ಅಷ್ಟೆ ಪ್ರಮಾಣದಲ್ಲಿ ಮಾದ್ಯಮ ಕ್ಷೇತ್ರ ಉದ್ಯವಾಗಿ ಬದಲಾವಣೆ ಹೊಂದಿದೆ ಎಂದರು.
ನೂತನವಾಗಿ ಆರಂಭವಾದ ನ್ಯೂಸ್ ಪೋರ್ಟಲ್ ನಾಡಿನ ಜನರ ಧ್ವನಿಯಾಗಿ ನಿಜ ಅರ್ಥದಲ್ಲಿ ಪ್ರತಿ ಮನದ ಪೈರಾಗಲಿ. ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರ ಮನೆಮನ ತಲುಪುವಂತಾಗಲಿ. ಲಕ್ಷ್ಮೀ ರವಿಕಾಂತ ಅಂಗಡಿ ಅವರ ಸಾರಥ್ಯದಲ್ಲಿ ಆರಂಭವಾದ ಪೋರ್ಟಲ್ ಸಾಮಾಜಿಕ ಕಾಳಜಿಯಿಂದ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸಾಹಿತಿ ಎ.ಎಸ್.ಮಕಾನದಾರ ಮಾತನಾಡಿ ಮುದ್ರಣ ಹಾಗೂ ಮಾದ್ಯಮ ಕ್ಷೇತ್ರದಲ್ಲಿ ಗದಗ ಜಿಲ್ಲೆ ಉತ್ತುಂಗ ಸ್ಥಾನದಲ್ಲಿದೆ. ಜಿಲ್ಲೆಯ ಮಾದ್ಯಮ ಕ್ಷೇತ್ರದ ಇತಿಹಾಸದಲ್ಲಿ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಇದೀಗ ಹೊಸ ಸೇರ್ಪಡೆಯಾಗಿದೆ. ಮಾದ್ಯಮ ಮನಸ್ಸು ಕಟ್ಟುವ ಕೆಲಸ ಮಾಡಬೇಕು. ಆದರೆ ಇಂದಿನ ದಿನಮಾನದಲ್ಲಿ ಅಂತಹ ವಾತಾವರಣ ಅಪರೂಪವಾಗಿದೆ. ಜನಪರ, ಜೀವಪರ ಕಾಳಜಿಯನ್ನಿಟ್ಟುಕೊಂಡು ಮಾದ್ಯಮ ಕಾರ್ಯ ನಿರ್ವಹಿಸಬೆಕಾದ ಅನಿವಾರ್ಯತೆ ಇದೆ ಎಂದರು.


ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ ಇಂದು ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕೆಲಗಳಾಗಬೇಕಿದೆ. ಆದರೆ ಇಚ್ಛಾಸಕ್ತಿ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಹೀಗಾಗಿ ಹೆಸರೇ ಸೂಚಿಸುವಂತೆ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಉತ್ತರ ಕರ್ನಾಟಕ ಸುದ್ದಿಗಳಿಗೆ ಆದ್ಯತೆ ನೀಡಿದರೆ ಒಳಿತು ಎಂದು ಸಲಹೆ ನೀಡಿದರು.
ಪತ್ರಕರ್ತ ನೂರಅಹ್ಮದ್ ಮಕಾನದಾರ ಮಾತನಾಡಿ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಗದೇ ಇಡೀ ನಾಡಿನ ಜನರ ನಾಡಿಯಾಗಲಿದೆ. ನಾಡಿನ ಪ್ರಸ್ತುತ ವಿದ್ಯಮಾನದ ಮೇಲೆ ಬೆಳಕು ಚೆಲ್ಲಲಿದೆ. ಉತ್ತರ ಕರ್ನಾಟಕ ಭಾಷಾ ಸೊಗಡಿನ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗಿದೆ ಎಂದರು.
ಈ ವೇಳೆ ಶಿಕ್ಷಕ ನ್ಯಾಯವಾದಿ ಎಸ್.ಕೆ.ನದಾಫ್, ಕೆ.ಸಿ.ನಭಾಪೂರ್, ನೀಲೂ ರಾಠೋಡ್, ಟಿ.ವಿ.ಗುಡ್ಡಿಮಠ, ಚಂದ್ರು ಚವ್ಹಾಣ್, ವೆಂಕಟೇಶ್ ಯಾದವ್, ಪಾಂಡು ಚವ್ಹಾಣ್ ಮಾತನಾಡಿದರು.
ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಸಂಪಾದಕಿ ಲಕ್ಷ್ಮೀ ರವಿಕಾಂತ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಐ.ಎಸ್.ಪೂಜಾರ, ಲಕ್ಷ್ಮಣ ಮುರಡಿ, ಧರ್ಮಾ ರಾಠೋಡ, ವಿನೋದ ಮುರಡಿ, ವಿನಾಯಕ ರಾಠೋಡ, ಶ್ರೀನಿವಾಸ ಮಾಳಗಿಮನಿ, ಶೋಭಾ ನಾಯಕ, ಆರ್.ಎಚ್.ಅಂಗಡಿ ಸೇರಿದಂತೆ ಇತರರು ಪಾಲ್ಗೋಂಡಿದ್ದರು.




7 comments
  1. ಸೂಪರ್ ಸರ್ ಇದೊಂದು ಒಳ್ಳೆಯ ಕೆಲಸ ಈ ಪತ್ರಿಕೆ
    ರೈತರ, ಕಾರ್ಮಿಕರ, ಶ್ರಮಿಕರ, ಬಡವರ, ದಲಿತರ ಹಾಗು ಹಿಂದುಳಿದವರ ದ್ವನಿಯಾಗಲಿ ಎಂದು ಈ ಮೂಲಕ ಕೋರುತ್ತಾ ತಮಗೆ ನನ್ನ ಶುಭಾಶಯಗಳು. ಈ ಪತ್ರಿಕೆ ಪತ್ರಿಕೋದ್ಯಮ ರಂಗದಲ್ಲಿ ತನ್ನದೇ ಯಾದ್ ಛಾಪು ಮೂಡಿಸಲಿ.

  2. ಸಾಮಾಜಿಕ ನ್ಯಾಯ & ಹಕ್ಕುಗಳನ್ನು ಹಾಗೂ ಸುಸ್ಥಿರ ಪ್ರಗತಿಪರ ಸಮಾಜ ರೂಪಿಸುವಲ್ಲಿ ನಾಡಿನ ಜನರ ಜೀವನಾಡಿಯಾಗಿ ನಿಮ್ಮ ಪತ್ರಿಕೆ & ಮಾಧ್ಯಮ & ಪೋರ್ಟಲ್ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತಾ ಶುಭವಾಗಲಿ ಎಂದು ಹಾರೈಸುತ್ತೇನೆ..
    ಜೈ ಸೇವಾಲಾಲ್ ಭಿಯಾ..

  3. ಜನರ ನೋವಿಗೆ ದನಿಯಾಗಲಿ…
    ಬಡವರ, ಮಕ್ಕಳ, ಮಹಿಳೆಯರ, ವೃದ್ದರ, ರೈತರ ಹಾಗೂ ತಳ ಸಮುದಾಯದವರ ಕೂಗಿಗೆ ನೊಗವಾಗಲಿ…
    ಶುಭ ಹಾರೈಕೆಗಳು…..

  4. ಪ್ರಭಾ ನ್ಯೂಸ್ ಗೆ ಅಭಿನಂದನೆಗಳು
    ನಿಮ್ಮ ನ್ಯೂಸ್ ಯಶೇಸ್ಸು ಗೊಳ್ಳಲಿ.

  5. Great work, Congratulations .
    I wish the best of luck in all of your future endeavors,

Leave a Reply

Your email address will not be published. Required fields are marked *

You May Also Like

ನಿನ್ನೆ ಒಂದೇ ದಿನ ದಾಖಲೆಯ ಸೋಂಕಿತರು

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದೆ. ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆಯಾಗುತ್ತಿದ್ದಾರೆ.…

ಒಮಿಕ್ರಾನ ಭಿತಿ ಇಂದಲ್ಲಾ ನಾಳೆಯಿಂದ ಶುರು..!

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ನಗರದ 35 ವಾರ್ಡಗಳಲ್ಲಿ ನಡಿಯುತ್ತಿರುವ…

ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳ ದುರಸ್ಥಿ ಬಗ್ಗೆ ಸಚಿವ ಪಾಟೀಲ ಮಾಹಿತಿ

ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯವರೆಗೆ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದ್ದು, ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿ ಮಾಡಲು ಪರಿವರ್ತನೆ ಮಾಡಲು ಸರ್ಕಾರಕ್ಕೆ ಮನವಿ ಮಡಿದ್ದೇವೆ ಎಂದು ಸಣ್ಣ ಕೈಗಾರಿಕಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಿ.ಸಿ.ಪಾಟೀಲ ಹೇಳಿದರು.